ತೂಕವನ್ನು ಕಳೆದುಕೊಂಡು ಫಿಟ್ ಆಗಿರಬೇಕೆಂಬುದು ಎಲ್ಲರ ಕನಸು. ಅದಕ್ಕಾಗಿ ವ್ಯಾಯಾಮ, ಜಿಮ್, ಡಯಟ್ ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಅಂತವರು ತೂಕವನ್ನು ಬಹಳ ಬೇಗ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರವಾದ ಪಪ್ಪಾಯಿ ಹಣ್ಣನ್ನು ಈ ರೀತಿಯಾಗಿ ಸೇವಿಸಿ.
ಬೆಳಿಗ್ಗೆ ಉಪಹಾರಕ್ಕೆ ಒಂದು ಲೋಟ ಬಾದಾಮಿ ಹಾಲನ್ನು ತೆಗೆದುಕೊಂಡು 30 ನಿಮಿಷಗಳ ಬಳಿಕ ಪಪ್ಪಾಯಿ ಸಲಾಡ್ ನ್ನು ಸೇವಿಸಿ.
ಮಧ್ಯಾಹ್ನ ಊಟಕ್ಕೆ ಟೊಮೆಟೊ, ಪಾಲಕ್, ಆಲಿವ್, ಬೆಳ್ಳುಳ್ಳಿ ಹೊಂದಿರುವ ಧಾನ್ಯಗಳನ್ನು ಸೇರಿಸಿ ಸಲಾಡ್ ತಯಾರಿಸಿ ಅನ್ನದೊಂದಿಗೆ ಸೇವಿಸಿ. ಅದರೊಂದಿಗೆ ಒಂದು ಲೋಟ ಪಪ್ಪಾಯಿ ಹಣ್ಣಿನ ಜ್ಯೂಸ್ ಕುಡಿಯಿರಿ.
ಸಂಜೆಯ ವೇಳೆ ಲಘು ಆಹಾರವಾಗಿ ಪಪ್ಪಾಯಿ, ಅನಾನಸ್ ನ್ನು ಸೇವಿಸಬಹುದು. ರಾತ್ರಿಯ ಊಟಕ್ಕೆ ತರಕಾರಿಯ ಸೂಪ್ ತಯಾರಿಸಿ ಪಪ್ಪಾಯಿ ಹಣ್ಣಿನೊಂದಿಗೆ ಸೇವಿಸಿ. 2 ದಿನಗಳ ಕಾಲ ಹೀಗೆ ಮಾಡಿದರೆ ನಿಮ್ಮ ತೂಕ ಇಳಿಯುತ್ತದೆ.