ಸೂಕ್ಷ್ಮದೇಹಿಗಳಿಗೆ ಕೇವಲ ಖರ್ಜೂರ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುವುದುಂಟು. ಅದರ ಬದಲು ಒಂದು ಲೋಟ ಹಾಲು ಕುಡಿದು ಖರ್ಜೂರ ಸೇವಿಸಿದರೆ ಅದೆಷ್ಟು ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?
ನಿಮ್ಮ ಜಡತ್ವವನ್ನು ಹೋಗಲಾಡಿಸಲು ಇದು ಹೇಳಿ ಮಾಡಿಸಿದ ಮದ್ದು. ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರುವುದರಿಂದ ದೇಹಾಲಸ್ಯ ದೂರವಾಗಿ ಚೈತನ್ಯ ಕಾಣಿಸಿಕೊಳ್ಳುತ್ತದೆ.
ಹಾಲಿನೊಂದಿಗೆ ಖರ್ಜೂರ ಸೇವಿಸುವುದರಿಂದ ಮೂಳೆಗಳು ದೃಢವಾಗುತ್ತವೆ. ಇದರ ಸೇವನೆಯಿಂದ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗುತ್ತದೆ. ರಕ್ತಹೀನತೆ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಮದ್ದು.
ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುತ್ತದೆ. ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ಮತ್ತು ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದು ಬಹಳ ಒಳ್ಳೆಯದು.
ಕಣ್ಣುಗಳ ಕಾಳಜಿಗೆ, ಹಲ್ಲಿನ ಆರೋಗ್ಯಕ್ಕೆ ಖರ್ಜೂರದಲ್ಲಿ ಮದ್ದಿದೆ. ಹಾಗಾಗಿ ನಿತ್ಯ ಹಾಲು ಕುಡಿಯುವಾಗ ಮರೆಯದೆ ಒಂದು ಅಥವಾ ಎರಡು ಖರ್ಜೂರ ತಿನ್ನಿ, ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ.