![](https://kannadadunia.com/wp-content/uploads/2020/04/Creamy-mint-mango-and-kiwi-smoothie_square-555x555-1.jpg)
ಬೇಕಾಗುವ ಸಾಮಾಗ್ರಿ:
ಕಿವಿ ಹಣ್ಣು-1, ಬಾಳೆಹಣ್ಣು-1, ಹಾಲು-1 ಕಪ್, ½-ಬೆಣ್ಣೆ ಹಣ್ಣು.
ಮಾಡುವ ವಿಧಾನ:
ಮೊದಲಿಗೆ ಕಿವಿಹಣ್ಣು, ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕತ್ತರಿಸಿಕೊಳ್ಳಿ. ನಂತರ ಬೆಣ್ಣೆಹಣ್ಣಿನ ಬೀಜ ತೆಗೆದು ಒಳಗಿನ ತಿರುಳನ್ನು ತೆಗೆದಿಟ್ಟುಕೊಳ್ಳಿ. ಇವನ್ನು ಒಂದು ಮಿಕ್ಸಿ ಜಾರಿಗೆ ಸೇರಿಸಿ ಒಂದು ಸುತ್ತು ರುಬ್ಬಿಕೊಳ್ಳಿ.
ನಂತರ ಹಾಲು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಗ್ಲಾಸ್ ಗೆ ತೆಗೆಯಿರಿ. ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಸಕ್ಕರೆ ಇಷ್ಟಪಡುವವರು ರುಬ್ಬಿಕೊಳ್ಳುವಾಗಲೇ ಸಕ್ಕರೆ ಸೇರಿಸಬಹುದು. ಬಾಳೆಹಣ್ಣು ಸಿಹಿ ಆಗಿರುವುದರಿಂದ ಸಕ್ಕರೆ ಅಷ್ಟಾಗಿ ಈ ಸ್ಮೂಥಿಗೆ ಬೇಕಾಗುವುದಿಲ್ಲ.