alex Certify ಸಮೋಸಾ ತಿನ್ನಿ, 51 ಸಾವಿರ ರೂ. ಗೆಲ್ಲಿ…! ಯಾರಿಗುಂಟು, ಯಾರಿಗಿಲ್ಲ ಈ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮೋಸಾ ತಿನ್ನಿ, 51 ಸಾವಿರ ರೂ. ಗೆಲ್ಲಿ…! ಯಾರಿಗುಂಟು, ಯಾರಿಗಿಲ್ಲ ಈ ಅದೃಷ್ಟ

ಮೀರತ್​ (ಉತ್ತರ ಪ್ರದೇಶ): ಸಮೋಸಾ ಎಂದರೆ ಇಷ್ಟ ಪಡದವರೇ ಇಲ್ಲ ಎನ್ನಬಹುದೇನೋ. ಇದರ ಹೆಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂಥ ಸಮೋಸಾವನ್ನು ತಿಂದರೆ ನೀವು ದುಡ್ಡು ಕೊಡಬೇಕಾಗಿಲ್ಲ, ಬದಲಿಗೆ ತಿಂದರೆ ಅವರೇ ನಿಮಗೆ ದುಡ್ಡು ಕೊಡ್ತಾರೆ, ಅದೂ ಬರೋಬ್ಬರಿ 51 ಸಾವಿರ ರೂಪಾಯಿ!

ಹಾಗೆಂದು ಇದೇನು ನಕಲಿ ಸಮೋಸಾ ಅಂದ್ಕೋಬೇಡಿ. ಉತ್ತರ ಪ್ರದೇಶದ ಮೀರತ್​ನ ಫೇಮಸ್​ ರುಚಿರುಚಿ ಸಮೋಸಾ. ಈ ಸಮೋಸಾ ತಿನ್ನಲು ಅರ್ಧ ಗಂಟೆ ಟೈಂ ಕೊಡ್ತಾರೆ. ತಿಂದರೆ 51 ಸಾವಿರ ರೂಪಾಯಿ ನಿಮ್ಮ ಜೇಬಿಗೆ ಗ್ಯಾರೆಂಟಿ!

ಅಸಲಿಗೆ ಏನಿದು ಸಮೋಸಾ ಚಾಲೆಂಜ್ ಅಂತಾ ತಿಳಿದುಕೊಳ್ಳುವುದಾದರೆ, ಇದರ ತೂಕ ಬರೋಬ್ಬರಿ ಎಂಟು ಕೆ.ಜಿ. ಇದನ್ನು ಅರ್ಧ ಗಂಟೆಯಲ್ಲಿ ತಿಂದವರು ಮರು ನಿಮಿಷದಲ್ಲಿಯೇ 51,000 ರೂಪಾಯಿ ಒಡೆಯರಾಗುತ್ತಾರೆ ಎಂದು ಸ್ವತಃ ಅಂಗಡಿ ಮಾಲೀಕರೇ ಘೋಷಿಸಿದ್ದಾರೆ.

ಅಂದಹಾಗೆ ಈ ಸಮೋಸಾದ ಹೆಸರು ಬಾಹುಬಲಿ ಸಮೋಸಾ. ಈಗ ಹೇಳಿ ಇದನ್ನು ತಿನ್ನಲು ನಿಮಗೆ ಸಾಧ್ಯವೆ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...