ಸಂಜೆ ಸ್ನ್ಯಾಕ್ಸ್, ಅಥವಾ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುವವರು ಸುಲಭವಾಗಿ ಮನೆಯಲ್ಲಿ ರುಚಿಕರವಾದ ಬ್ರೆಡ್ ಆಮ್ಲೆಟ್ ಮಾಡಿಕೊಂಡು ಸವಿಯಿರಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬ್ರೆಡ್- 2 ಪೀಸ್, ಮೊಟ್ಟೆ- 3, 1- ಈರುಳ್ಳಿ ಚಿಕ್ಕದ್ದಾಗಿ ಕತ್ತರಿಸಿದ್ದು, 2 ಹಸಿಮೆಣಸು ಸಣ್ಣಗೆ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು- 2 ಟೇಬಲ್ ಸ್ಪೂನ್, ¼ ಟೀ ಸ್ಪೂನ್- ಕಾಳುಮೆಣಸಿನ ಪುಡಿ, ಚಿಟಿಕೆ- ಅರಿಶಿನ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- 2 ಟೇಬಲ್ ಸ್ಪೂನ್.
ಮೊದಲಿಗೆ ಒಂದು ಬೌಲ್ ಗೆ ಮೂರು ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ಕಾಳುಮೆಣಸಿನ ಪುಡಿ, ಅರಿಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ತವಾಕ್ಕೆ ಸಣ್ಣೆ ಸವರಿಕೊಳ್ಳಿ.
ನಂತರ ಬ್ರೆಡ್ ಪೀಸ್ ಅನ್ನು ಟೋಸ್ಟ್ ಮಾಡಿಕೊಂಡು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಪ್ಯಾನ್ ಗೆ ಎಣ್ಣೆ ಸವರಿ ಮಾಡಿಟ್ಟುಕೊಂಡ ಮೊಟ್ಟೆ ಮಿಶ್ರಣವನ್ನು ಹಾಕಿ. ನಂತರ ಅದರ ಮೇಲೆ ಬ್ರೆಡ್ ಅನ್ನು ಇಟ್ಟು ಆಮ್ಲೆಟ್ ಅನ್ನು ಮಡಚಿದರೆ ರುಚಿಕರವಾದ ಬ್ರೆಡ್ ಆಮ್ಲೆಟ್ ಸವಿಯಲು ಸಿದ್ಧ.