ಏನಾದ್ರೂ ಸಿಹಿ ತಿನ್ನುವ ಆಸೆಯಾಗಿದೆಯಾ? ಹೊಸ ಸ್ವೀಟ್ ತಿನ್ನಬೇಕು ಅನ್ನಿಸ್ತಿದೆಯಾ? ಹಾಗಾದ್ರೆ ಯಾಕೆ ತಡ. ಫಟಾಫಟ್ ಅಂತಾ ಬ್ರೆಡ್ ಗುಲಾಬ್ ಜಾಮೂನ್ ಮಾಡಿ, ಎಂಜಾಯ್ ಮಾಡಿ.
ಬ್ರೆಡ್ ಗುಲಾಬ್ ಜಾಮೂನ್ ಮಾಡಲು ಬೇಕಾಗುವ ಸಾಮಗ್ರಿಗಳು :
6-8 ಬ್ರೆಡ್ ತುಂಡು
ಒಂದು ಚಮಚ ಮೈದಾ ಹಿಟ್ಟು
1 ಚಮಚ ನುಣ್ಣಗಿನ ರವೆ
3 ಚಮಚ ಹಾಲು
½ ಚಮಚ ಏಲಕ್ಕಿ ಪುಡಿ
½ ಚಮಚ ಸಕ್ಕರೆ ಪುಡಿ
1 ಚಮಚ ಖೋವಾ
1 ಚಮಚ ಕತ್ತರಿಸಿದ ಪಿಸ್ತಾ
1 ಕಪ್ ಕರಿಯಲು ಎಣ್ಣೆ
ಮಾಡುವ ವಿಧಾನ :
ಕತ್ತರಿಸಿದ ಬ್ರೆಡ್ ಗಳ ತುಂಡನ್ನು ಪ್ಲೇಟ್ ನಲ್ಲಿ ಹಾಕಿ, ಅದರ ಮೇಲೆ ಹಾಲನ್ನು ಹಾಕಿ.
ನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಖೋವಾ ಬೆರೆಸಿ.
ಐದು ನಿಮಿಷದ ನಂತರ ಬ್ರೆಡ್ ತುಂಡುಗಳಿಗೆ ಮೈದಾ ಮತ್ತು ರವೆ ಸೇರಿಸಿ, ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ತುಂಬಾ ಮೆದು ಅಥವಾ ತುಂಬಾ ಗಟ್ಟಿಯಾಗಬಾರದು.
ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
ಎಣ್ಣೆಯನ್ನು ಬಿಸಿಯಾಗಿಟ್ಟು, ತಯಾರಾದ ಉಂಡೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿ.
ನಂತರ ಸಕ್ಕರೆ ಪಾಕದಲ್ಲಿ ಅದನ್ನು ಮುಳುಗಿಸಿಡಿ.
2-3 ಗಂಟೆ ಸಕ್ಕರೆ ಪಾಕದಲ್ಲಿ ಉಂಡೆಗಳು ಚೆನ್ನಾಗಿ ನೆನೆಯಲಿ.
ನಂತರ ಜಾಮೂನ್ ಮೇಲೆ ಪಿಸ್ತಾ ತುಂಡುಗಳನ್ನಿಟ್ಟು ಸರ್ವ್ ಮಾಡಿ.