alex Certify BREAKING: ಟರ್ಕಿ – ಸಿರಿಯಾ ಬಳಿಕ ನ್ಯೂಜಿಲ್ಯಾಂಡ್ ನಲ್ಲೂ ನಡುಗಿದ ಭೂಮಿ; ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಟರ್ಕಿ – ಸಿರಿಯಾ ಬಳಿಕ ನ್ಯೂಜಿಲ್ಯಾಂಡ್ ನಲ್ಲೂ ನಡುಗಿದ ಭೂಮಿ; ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

ಇತ್ತೀಚೆಗಷ್ಟೇ ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ 40,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಇನ್ನೂ ಪರಿಹಾರ ಕಾರ್ಯಚರಣೆ ಮುಂದುವರೆದಿರುವ ಮಧ್ಯೆ ಈಗ ನ್ಯೂಜಿಲ್ಯಾಂಡ್ ನಲ್ಲೂ ಭೂಕಂಪನವಾಗಿದೆ.

ಬುಧವಾರದಂದು ವೆಲ್ಲಿಂಗ್ಟನ್ ಸಮೀಪದ ವಾಯುವ್ಯ ಹಟ್ ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಭೂಮಿಯ 48 ಅಡಿ ಆಳದಲ್ಲಿ ಕಂಪನ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನತೆಗೆ ಕಂಪನದ ಅನುಭವವಾಗಿದ್ದು, ಜನ ತಮ್ಮ ಮನೆ ಹಾಗೂ ಕಚೇರಿಗಳಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿದ ಕುರಿತು ಈವರೆಗೆ ವರದಿಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...