ಇತ್ತೀಚೆಗಷ್ಟೇ ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ 40,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಇನ್ನೂ ಪರಿಹಾರ ಕಾರ್ಯಚರಣೆ ಮುಂದುವರೆದಿರುವ ಮಧ್ಯೆ ಈಗ ನ್ಯೂಜಿಲ್ಯಾಂಡ್ ನಲ್ಲೂ ಭೂಕಂಪನವಾಗಿದೆ.
ಬುಧವಾರದಂದು ವೆಲ್ಲಿಂಗ್ಟನ್ ಸಮೀಪದ ವಾಯುವ್ಯ ಹಟ್ ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಭೂಮಿಯ 48 ಅಡಿ ಆಳದಲ್ಲಿ ಕಂಪನ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನತೆಗೆ ಕಂಪನದ ಅನುಭವವಾಗಿದ್ದು, ಜನ ತಮ್ಮ ಮನೆ ಹಾಗೂ ಕಚೇರಿಗಳಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿದ ಕುರಿತು ಈವರೆಗೆ ವರದಿಯಾಗಿಲ್ಲ.