ಉತ್ತರಾಖಂಡ್ನ ಜೋಶಿ ಮಠದಲ್ಲಿ ಇಂದು ಬೆಳಗ್ಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಿಸಿದೆ. ಮುಂಜಾನೆ 5:58ರ ಸುಮಾರಿಗೆ ಜೋಶಿಮಠದ 31 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ.
ಭಾರತೀಯ ಕಾಲಮಾನ 5:58:31ಕ್ಕೆ ಸರಿಯಾಗಿ 4.1 ತೀವ್ರತೆಯ ಭೂಕಂಪವು ಉತ್ತರಖಾಂಡ್ನ ಜೋಶಿಮಠದ 31 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಭವಿಸಿದೆ ಎಂದು ಎನ್ಸಿಎಸ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.