alex Certify BREAKING NEWS: ತಡರಾತ್ರಿ ಜಮ್ಮು –ಕಾಶ್ಮೀರ, ನೇಪಾಳದಲ್ಲಿ ಭೂಕಂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ತಡರಾತ್ರಿ ಜಮ್ಮು –ಕಾಶ್ಮೀರ, ನೇಪಾಳದಲ್ಲಿ ಭೂಕಂಪ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ(ಎನ್‌.ಸಿ.ಎಸ್.) ತಿಳಿಸಿದೆ.

ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಮಧ್ಯರಾತ್ರಿ 12:37 ರ ನಂತರ ಭೂಕಂಪ ಸಂಭವಿಸಿದೆ. 75.59 ಕಿಮೀ ಉದ್ದ, 5 ಕಿಮೀ ಆಳದ ಭೂಕಂಪ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಸಂಭವಿಸಿದೆ.

ನೇಪಾಳದ ಭಕ್ತಪುರನಗರದಲ್ಲಿಯೂ ತಡರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ಕಂಪನದ ತೀವ್ರತೆ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...