alex Certify BIG BREAKING: ಕಲಬುರಗಿಯಲ್ಲಿ ಲಘು ಭೂಕಂಪ; ಮತ್ತೆ ಕಂಪಿಸಿದ ಭೂಮಿ, ಜನರಲ್ಲಿ ಹೆಚ್ಚಿದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕಲಬುರಗಿಯಲ್ಲಿ ಲಘು ಭೂಕಂಪ; ಮತ್ತೆ ಕಂಪಿಸಿದ ಭೂಮಿ, ಜನರಲ್ಲಿ ಹೆಚ್ಚಿದ ಆತಂಕ

ಕಲಬುರ್ಗಿ: ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಚಿಂಚೋಳಿ, ಕಾಳಗಿ ತಾಲೂಕಿನ ಹಲವು ಕಡೆ ಭೂಕಂಪನವಾಗಿದೆ.

ಕೋಡ್ಲಿ, ಹೊಸಳ್ಳಿ, ಹೊಡೆಬೀರನಹಳ್ಳಿ, ಗಡಿಕೇಶ್ವರ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ನಿನ್ನೆ ರಾತ್ರಿ 9.52 ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1 ರಷ್ಟು ದಾಖಲಾಗಿದೆ. ಪದೇಪದೇ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ರಾತ್ರಿ ಮತ್ತೆ ಭೂಮಿ ನಡುಗಿದ ಅನುಭವವಾಗಿದ್ದು, ಆತಂಕಗೊಂಡ ಜನ ಮನೆಯಿಂದ ಹೊರಗೆ ಬಂದು ತಮಗಾದ ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...