ಕೃಷಿಯಲ್ಲಿ ಸಾಂಪ್ರದಾಯಿಕ ಬೆಳೆಗಳ ಹೊರತಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದ್ರೆ ಹೆಚ್ಚಿನ ಆದಾಯ ಪಡೆಯಬಹುದು. ಅಂತ ಒಂದು ಕೃಷಿ ಲವಂಗದ ಎಲೆ ಕೃಷಿ. ಕೇವಲ 50 ಸಸಿಗಳನ್ನು ನೆಡುವ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡಬಹುದು.
ಲವಂಗದ ಎಲೆಗಳಿಂದ ಪ್ರತಿ ವರ್ಷ 1.50 ಲಕ್ಷದಿಂದ 2.50 ಲಕ್ಷ ರೂಪಾಯಿಗಳವರೆಗೆ ಆದಾಯವನ್ನು ಗಳಿಸಬಹುದು. ಈ ಕೃಷಿಯಲ್ಲಿ ಹೂಡಿಕೆ ಮಾಡುವ ಮೂಲಕ ಜೀವನಪರ್ಯಂತ ಗಳಿಸಬಹುದು. ಲವಂಗ ಎಲೆ ಕೃಷಿಗೆ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
ಮಾರುಕಟ್ಟೆಯಲ್ಲಿ ಲವಂಗ ಎಲೆಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಕೃಷಿ ಲಾಭದಾಯಕ ವ್ಯವಹಾರವೆಂದು ಸಾಬೀತಾಗಿದೆ. ಲವಂಗ ಎಲೆಯನ್ನು ಬೆಳೆಸುವುದು ತುಂಬಾ ಸುಲಭ. ಆದ್ರೆ ಈ ಕೃಷಿ ಕೂಡ ತುಂಬಾ ಅಗ್ಗ.
ಒಂದು ಗಿಡದ ಎಲೆಗಳಿಂದ ಪ್ರತಿ ವರ್ಷ ಸುಮಾರು 3000 ರಿಂದ 5000 ರೂಪಾಯಿಗಳನ್ನು ಗಳಿಸಬಹುದು.
ಲವಂಗ ಎಲೆಗಳನ್ನು ಅಮೆರಿಕ, ಯುರೋಪ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಇದನ್ನು ಸೂಪ್, ಸ್ಟ್ಯೂ, ಮಾಂಸ, ಸಮುದ್ರಾಹಾರ ಮತ್ತು ಅನೇಕ ರೀತಿಯ ಆಹಾರ ತಯಾರಿಗಳಲ್ಲಿ ಬಳಸಲಾಗುತ್ತದೆ.
ಭಾರತ ಮತ್ತು ಪಾಕಿಸ್ತಾನದಲ್ಲಿ, ಇದನ್ನು ಬಿರಿಯಾನಿ ಮತ್ತು ಇತರ ಮಸಾಲೆಯುಕ್ತ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಪ್ರತಿದಿನ ಅಡುಗೆಮನೆಯಲ್ಲಿ ಗರಂ ಮಸಾಲೆಯಾಗಿ ಇದನ್ನು ಬಳಸಲಾಗುತ್ತದೆ.