ಇನ್ಸ್ಟಾಗ್ರಾಮ್ ಬಳಕೆದಾರರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಷ್ಟು ದಿನ ಕೇವಲ ಮನರಂಜನೆಗಾಗಿ ಇನ್ಸ್ಟಾಗ್ರಾಮ್ ವೀಕ್ಷಣೆ ಮಾಡ್ತಿದ್ದರೆ ಇನ್ಮುಂದೆ ಗಳಿಕೆ ಶುರು ಮಾಡಿ. ಸಾಕಷ್ಟು ಫಾಲೋವರ್ಸ್ ಹೊಂದಿಲ್ಲದಿದ್ದರೂ ಹಣ ಗಳಿಸಬಹುದು. 1,000 ಫಾಲೋವರ್ಸ್ ಇದ್ದರೂ ನಿಮಗೆ ಹಣ ಸಿಗಲಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್ ಆಗುವ ಮೂಲಕ ಹಣ ಸಂಪಾದಿಸಬಹುದು. ಇನ್ಫ್ಲುಯೆನ್ಸರ್ ಎಂದರೆ, ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಾಹಿತಿಯನ್ನು ನಿಯಮಿತವಾಗಿ ಹಂಚಿಕೊಳ್ಳುವ ಮೂಲಕ, ಗುರುತಿಸಿಕೊಳ್ಳುವ ವ್ಯಕ್ತಿ. ಸಾವಿರಾರು ಫಾಲೋವರ್ಸ್ ಹೊಂದಿರುವ ಬಳಕೆದಾರ, ಕೆಲವೊಂದು ಉತ್ಪನ್ನ, ವಸ್ತುಗಳ ಪ್ರಚಾರ ಮಾಡಿ ಹಣ ಗಳಿಸುತ್ತಿದ್ದಾರೆ.
ಭೂಗತ ಪಾತಕಿ ಛೋಟಾ ರಾಜನ್ ಮತ್ತೊಮ್ಮೆ ಏಮ್ಸ್ ಆಸ್ಪತ್ರೆಗೆ ದಾಖಲು
ಕೆಲ ಕಂಪನಿಗಳ ಉತ್ಪನ್ನಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಕೆಲವು ಕಂಪನಿಗಳು ಪ್ರಚಾರಕ್ಕೆ ಹಣ ನೀಡಿದ್ರೆ ಮತ್ತೆ ಕೆಲ ಕಂಪನಿಗಳು ಲಿಂಕ್ ನೀಡುತ್ತವೆ. ಆ ಲಿಂಕ್ ಗಳನ್ನು ನೀವು ಹಂಚಿಕೊಳ್ಳಬೇಕು. ನೀವು ನೀಡಿದ ಲಿಂಕ್ ಕ್ಲಿಕ್ ಮಾಡಿ, ಬಳಕೆದಾರರು ವಸ್ತುಗಳನ್ನು ಖರೀದಿ ಮಾಡಿದಲ್ಲಿ, ಪ್ರತಿ ಖರೀದಿಗೆ ಕಮಿಷನ್ ಸಿಗುತ್ತದೆ.
ಫೋಟೋಗಳ ಮೂಲಕವೂ ನೀವು ಹಣ ಸಂಪಾದಿಸಬಹುದು. ಇದಕ್ಕಾಗಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಮಾರಾಟ ಮಾಡಬೇಕು. ವೀಡಿಯೊಗಳು ಮತ್ತು ಅನಿಮೇಷನ್‌ಗಳು, ಚಿತ್ರಕಲೆ, ಸೆಲ್ಫಿಗಳು ಮತ್ತು ಇತರ ರೀತಿಯ ದೃಶ್ಯ ವಿಷಯವನ್ನು ನೀವು ವಾಟರ್ ಮಾರ್ಕ್ ನೊಂದಿಗೆ ಹಂಚಿಕೊಳ್ಳಬೇಕು.