ಧಾರವಾಡ: ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಇ-ಕೆವೈಸಿ ಮತ್ತು ಇ-ಆಡಳಿತ ಇಲಾಖೆಗೆ ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ, ಲಿಂಗ, ಸಂಬಂಧಗಳ ವಿವರಗಳ ಸಂಗ್ರಹಣಾ ಕಾರ್ಯವನ್ನು ಫೆ.1 ರಿಂದ ಪುನರಾರಂಭಿಸಿದೆ. ಫೆ.8 ರ ವರೆಗೆ ಈ ಕಾರ್ಯ ಮುಂದುವರೆಯಲಿದೆ.
ಕಾರ್ಡುದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಬಾಕಿ ಇರುವ ಪಡಿತರ ಚೀಟಿದಾರರ ಇ-ಕೆವೈಸಿ ನೀಡಬೇಕು ಎಂದು ಆಹಾರ ಇಲಾಖೆಯ ವತಿಯಿಂದ ಮಾಹಿತಿ ನೀಡಲಾಗಿದೆ.