alex Certify 4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು

ಹಬ್ಬದ ಮಾಸದ ಶಾಪಿಂಗ್‌ ಭರಾಟೆಯಲ್ಲಿ ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ.

ಇ-ಕಾಮರ್ಸ್ ಕಂಪನಿಗಳು ಈ ಮಾರಾಟದ ಮೇಳದಲ್ಲಿ $4.8 ಶತಕೋಟಿ (36,000 ಕೋಟಿ ರೂ.ಗಳು) ವ್ಯವಹಾರ ಮಾಡುವ ಗುರಿಯನ್ನು ಹೊಂದಿದ್ದವು ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧಕ ಸಂಸ್ಥೆ ರೆಡ್‌ಸಿಯರ್‌ ಕನ್ಸೆಲ್ಟಿಂಗ್ ತಿಳಿಸಿದೆ.

ಕಳೆದ ವರ್ಷದ ಹಬ್ಬದ ಮಾರಾಟ ಸಾಪ್ತಾಹದ ಮೊದಲ ಮೂರು ದಿನಗಳಲ್ಲೇ ಒಟ್ಟಾರೆ ಮಾರಾಟದ 63%ನಷ್ಟು ವಹಿವಾಟು ನಡೆದಿತ್ತು. ಈ ವರ್ಷದ ವೇಳೆ ಗುರಿ ಇಟ್ಟುಕೊಂಡಿರುವ ಮಾರಾಟದ 57%ನಷ್ಟು ವಹಿವಾಟು ಮೊದಲ ಮೂರು ದಿನಗಳಲ್ಲಿ ನಡೆದಿದೆ.

ದಿನಗೂಲಿ ನೌಕರರಿಗೆ 10 ಸಾವಿರ ರೂ., ಸಂಕಷ್ಟಕ್ಕೊಳಗಾದ ಮೃಗಾಲಯ ಸಿಬ್ಬಂದಿಗೆ ಸುಧಾಮೂರ್ತಿ ನೆರವು

ಮೊದಲ ಮೂರು ದಿನಗಳ ವಹಿವಾಟಿನಲ್ಲಿ ಸ್ಮಾರ್ಟ್‌ಫೋನ್‌ಗಳ ಕೊಡುಗೆಯೇ 50%ನಷ್ಟಿದೆ.

ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಒಟ್ಟಾರೆ $9 ಶತಕೋಟಿ ಮೌಲ್ಯದ ವಹಿವಾಟು ನಡೆಸುವ ಅಂದಾಜಿದೆ. ಮೊಬೈಲ್, ದೊಡ್ಡ ಅಪ್ಲಾಯನ್ಸ್‌ಗಳು, ಸೌಂದರ್ಯೋತ್ಪನ್ನಗಳು ಹಾಗೂ ಫ್ಯಾಶನ್‌ಗಳ ಕೆಟಗರಿಯಲ್ಲಿ ಹೆಚ್ಚಿನ ಸೇಲ್ಸ್ ಆಗುವ ನಿರೀಕ್ಷೆಯಿದೆ.

ಕೋವಿಡ್ ಹೊಡೆತದ ಬಳಿಕ ಜನರು ಹೆಚ್ಚಾಗಿ ಖರೀದಿ ಮಾಡಲು ಆನ್ಲೈನ್ ಪ್ಲಾಟ್‌ಫಾರಂಗಳನ್ನೇ ಅವಲಂಬಿಸುತ್ತಿರುವ ಕಾರಣ ಈ ವರ್ಷ ಆನ್ಲೈನ್ ಮೂಲಕ ಒಟ್ಟಾರೆ $49-52 ಶತಕೋಟಿಯಷ್ಟು ವಹಿವಾಟು ನಡೆಯುವ ನಿರೀಕ್ಷೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...