ಪ್ರಸಿದ್ಧ ಮಾಜಿ ಕುಸ್ತಿಪಟು ಹಾಗೂ ನಟನಾಗಿರುವ ಡ್ವೇನ್ ಜಾನ್ಸನ್ ಬಾಲ್ಯದಲ್ಲಿ ತಾವು ಮಾಡುತ್ತಿದ್ದ ಕಳ್ಳತನದ ಕುರಿತು ಕುತೂಹಲದ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ತಾವು 14 ವರ್ಷದವರಾಗಿದ್ದಾಗ ಹವಾಯಿಯಲ್ಲಿ ವಾಸಿಸುತ್ತಿದ್ದು, ಈ ಸಂದರ್ಭದಲ್ಲಿ ಸಮೀಪದ ಅಂಗಡಿಯಿಂದ ಪ್ರತಿದಿನ ಸ್ನಿಕರ್ಸ್ ಬಾರ್ ಚಾಕಲೇಟ್ ಕದಿಯುತ್ತಿದ್ದೆ ಎಂದಿದ್ದಾರೆ.
ಕಾರಣಾಂತರಗಳಿಂದ 1987 ರಲ್ಲಿ ತನ್ನ ಇಡೀ ಕುಟುಂಬ ಹವಾಯಿ ತೊರೆಯಿತು ಎಂದಿರುವ ನಟ, ತನ್ನ ತಪ್ಪನ್ನು ಸರಿಪಡಿಸುವ ಸಲುವಾಗಿ ವಾಪಸ್ ಹವಾಯಿಗೆ ಮರಳಿ ಅಂಗಡಿಯಲ್ಲಿರುವ ಎಲ್ಲಾ ಸ್ನಿಕರ್ ಬಾರ್ಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ತಾನು ಅಂದುಕೊಂಡಂತೆ ಮಾಡಿದೆ. ಅಂಗಡಿಗೆ ಹೋಗಿ ಎಲ್ಲವನ್ನೂ ಖರೀದಿ ಮಾಡಿ $298 ಪಾವತಿಸಿದೆ ಎಂದು ತಿಳಿಸಿದ್ದಾರೆ.
ಬಹಳ ವರ್ಷಗಳ ನಂತರ ಹವಾಯಿಗೆ ಹಿಂತಿರುಗಿ ಮನೆ ನಿರ್ಮಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿರುವುದಾಗಿ 50 ವರ್ಷದ ಈ ನಟ ಹೇಳಿಕೊಂಡಿದ್ದಾರೆ.