alex Certify ಈ ದುರ್ಗೆಗಿದೆ ಚಿನ್ನದ ಕಣ್ಣು…! ಉಡಿಸಲಾಗಿರುವ ಸೀರೆ ಬೆಲೆ ಬರೋಬ್ಬರಿ 1.5 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದುರ್ಗೆಗಿದೆ ಚಿನ್ನದ ಕಣ್ಣು…! ಉಡಿಸಲಾಗಿರುವ ಸೀರೆ ಬೆಲೆ ಬರೋಬ್ಬರಿ 1.5 ಲಕ್ಷ ರೂ.

ನವರಾತ್ರಿ ಎಂದರೆ ದೇಶಾದ್ಯಂತ ಆದಿಶಕ್ತಿಯನ್ನು ಒಂಭತ್ತು ದಿನಗಳ ಕಾಲ ವೈಭವದಿಂದ ಪೂಜಿಸುವ ಪುಣ್ಯಕಾಲ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ದುರ್ಗೆ ಪೂಜೆಗೆ ಈ ದಸರಾದಲ್ಲಿ ಬಹಳ ಮಹತ್ವ ನೀಡಲಾಗುತ್ತದೆ. ಗಣಪತಿ ಪೆಂಡಾಲ್‌ ಹಾಕಿ, ಗಣೇಶನನ್ನು ಗಲ್ಲಿಗಲ್ಲಿಗಳಲ್ಲಿ ಪೂಜಿಸುವಂತೆಯೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕೊತಾದಲ್ಲಿ ದುರ್ಗಾ ಪೆಂಡಾಲ್‌ಗಳ ವೈಭವ ನೋಡಲು ಎರಡು ಕಣ್ಣು ಸಾಲದು.

ತಾಯಿ ಕೃಪೆ ತೋರಿದ್ರೆ ನೀಡ್ತಾಳೆ ಈ ಸಂಕೇತ

ದುರ್ಗೆ ಮಣ್ಣಿನ ಮೂರ್ತಿ ಮಾಡಿಸಿ, ಐಷಾರಾಮಿ ವಸ್ತ್ರ, ಬೆಲೆಬಾಳುವ ಆಭರಣಗಳನ್ನು ತೊಡಿಸಿ ಪೆಂಡಾಲ್‌ನಲ್ಲಿ ಇರಿಸಿ ಪೂಜಿಸಲಾಗುತ್ತದೆ. ಮಹಿಳೆಯರು ಪೆಂಡಾಲ್‌ಗಳಲ್ಲಿ ಕುಂಕುಮ ಎರಚಿಕೊಂಡು ಸಾಂಪ್ರದಾಯಿಕ ನೃತ್ಯ ಕೂಡ ಮಾಡುತ್ತಾರೆ. ಇಂಥದ್ದೇ ಸಂಭ್ರಮಾಚರಣೆಯಲ್ಲಿರುವ ಕೋಲ್ಕೊತಾದಲ್ಲಿ ಕೊರೊನಾ ಮುನ್ನೆಚ್ಚರಿಕೆ, ನಿರ್ಬಂಧಗಳ ನಡುವೆಯೂ ಬಂಧು ಮಹಲ್‌ ಕ್ಲಬ್‌ ಸ್ಥಾಪಿಸಿರುವ ದುರ್ಗಾ ಪೆಂಡಾಲ್‌ ಭಾರಿ ಪ್ರಚಾರ ಪಡೆಯುತ್ತಿದೆ.

ಮನೆಯಲ್ಲೇ ಕುಳಿತು ಹಣ ಗಳಿಸಬೇಕಾ…..? ಸ್ಮಾರ್ಟ್ಫೋನ್ ಇದ್ರೆ ಈಗ್ಲೇ ಶುರು ಮಾಡಿ ಈ ಕೆಲಸ

ಇಲ್ಲಿನ ದುರ್ಗೆಯ ಮೂರ್ತಿಗೆ 10-11 ಗ್ರಾಮ್‌ ತೂಕದ ಚಿನ್ನದ ಕಣ್ಣುಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆಯೇ, ದುರ್ಗೆಗೆ ಉಡಿಸಲಾಗಿರುವ ಸೀರೆಯು ಅಲಂಕಾರ ವಿನ್ಯಾಸಕ್ಕಾಗಿ 6 ಗ್ರಾಮ್‌ ಚಿನ್ನವನ್ನು ಕೂಡ ಬಳಸಲಾಗಿದೆ.

ನವರಾತ್ರಿಯ ಒಂಭತ್ತು ದಿನ ಒಂಭತ್ತು ಪ್ರಸಾದ: ಈಡೇರುತ್ತೆ ಭಕ್ತರ ಇಷ್ಟಾರ್ಥ

ದುರ್ಗೆ ಪೂಜೆ ಮುಗಿದ ಬಳಿಕ ಈ ಸೀರೆಯನ್ನು ಬಡ ಕುಟುಂಬದ ಹೆಣ್ಣುಮಗಳ ಮದುವೆ ಉಡುಗೊರೆಯಾಗಿ ನೀಡಲು ತೀರ್ಮಾನಿಸಲಾಗಿದೆಯಂತೆ. ಈ ಐಷಾರಾಮಿ ದುರ್ಗಾ ಪೆಂಡಾಲ್‌ಗೆ ಬಂಧು ಮಹಲ್‌ ಕ್ಲಬ್‌ ಸದಸ್ಯರು ಒಟ್ಟಾರೆ 10 ಲಕ್ಷ ರೂ. ವೆಚ್ಚ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...