alex Certify ‘ದುರ್ಗಾ ಪೆಂಡಾಲ್’ ಉದ್ಘಾಟಿಸಿದ ಪೊಲೀಸ್‌ ಶ್ವಾನದಳದ ಸದಸ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದುರ್ಗಾ ಪೆಂಡಾಲ್’ ಉದ್ಘಾಟಿಸಿದ ಪೊಲೀಸ್‌ ಶ್ವಾನದಳದ ಸದಸ್ಯರು

ದಸರಾ ಬಂಗಾಳಿಗಳಿಗೆ ದೊಡ್ಡ ಹಬ್ಬ. ಮಾ ದುರ್ಗೆಯ ಆಗಮನಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಿವಿಧ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಹಲವಾರು ಪೆಂಡಾಲ್‌ಗಳಿಗೆ ಈಗಾಗಲೇ ಜನರು ಭೇಟಿ ನೀಡುತ್ತಿದ್ದಾರೆ.

ಒಂದು ನಿರ್ದಿಷ್ಟ ಪೂಜಾ ಪೆಂಡಾಲ್ ನೆಟ್ಟಿಗರ ಗಮನ ಸೆಳೆದಿದೆ. ಕಾರಣ, ಪೆಂಡಾಲ್ ಉದ್ಘಾಟನೆಯ ಸಂದರ್ಭದಲ್ಲಿ ಕೋಲ್ಕತ್ತಾ ಪೊಲೀಸ್ ಶ್ವಾನದಳದ ನಾಲ್ವರು ವಿಶೇಷ ಸದಸ್ಯರು ಉಪಸ್ಥಿತರಿದ್ದರು. ಕೋಲ್ಕತ್ತಾ ಪೊಲೀಸರು ಹಂಚಿಕೊಂಡ ಪೋಸ್ಟ್ ನಲ್ಲಿ, ನಾಲ್ಕು ನಾಯಿಗಳು ದೇವರ ಮುಂದೆ ನಮಸ್ಕರಿಸುತ್ತಿರುವ ಚಿತ್ರಗಳು ನೆಟ್ಟಿಗರ ಹೃದಯಗಳನ್ನು ಗೆದ್ದಿವೆ.

ನಮ್ಮ ಶ್ವಾನದಳದ 4 ಸದಸ್ಯರಾದ- ಲ್ಯಾಬ್ರಡಾರ್ಸ್ ಮೊಲಿ ಮತ್ತು ಕ್ಯಾಂಪೋರ್, ಜರ್ಮನ್ ಶೆಫರ್ಡ್ ಲಿಜಾ ಮತ್ತು ಡಿಂಕಿ ಕೋಲ್ಕತ್ತಾದ ಮೊದಲ ಸಾಕುಪ್ರಾಣಿ ಸ್ನೇಹಿ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಶೇಷವಾಗಿ ಕಾಣಿಸಿಕೊಂಡರು ಎಂದು ಕೋಲ್ಕತ್ತಾ ಪೊಲೀಸರ ಪೋಸ್ಟ್ ನಲ್ಲಿದೆ.

ನೆಟ್ಟಿಗರು ಇದನ್ನು ಕಂಡು ಕಾಮೆಂಟ್ ಮಹಾಪೂರವನ್ನೆ ಹರಿಸಿದ್ದಾರೆ. ಅದರಲ್ಲೂ ಶ್ವಾನ ಪ್ರೇಮಿಗಳಂತೂ ವಿಶೇಷ ಪ್ರೀತಿ ಸುರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...