ಮದುವೆ ಸಮಾರಂಭಗಳಲ್ಲಿ ಘಟಿಸುವ ಕ್ಯೂಟ್ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ.
ಸಾಮಾನ್ಯವಾಗಿ ವರಮಾಲೆಯ ಕ್ಷಣಗಳು ಮದುವೆ ಸಮಾರಂಭಗಳ ವೇಳೆ ಜರುಗುವ ಅತ್ಯಂತ ಫನ್ನಿ ಕ್ಷಣಗಳಾಗಿರುತ್ತವೆ. ಕೆಲವೊಮ್ಮೆ ಮದುಮಗಳ ಕೈಗೆ ಸಿಗದಂತೆ ಮದುಮಗ ಓಡಿಹೋಗುವುದು; ಮದುಮಕ್ಕಳನ್ನು ಅವರವರ ಕಡೆಯವರು ಮೇಲೆತ್ತಿಕೊಂಡು ಮಾಲೆ ಹಾಕಿಸುವುದು ಸೇರಿದಂತೆ ಅನೇಕ ರೀತಿಯ ಖುಷಿಯ ಶಾಸ್ತ್ರಗಳನ್ನು ನಾವೆಲ್ಲಾ ಕಂಡೇ ಇರುತ್ತೇವೆ.
ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್ ಆಯ್ತು ವಿಡಿಯೋ
ಇಂಥದ್ದೇ ಕ್ಷಣಗಳಲ್ಲಿ ಒಂದರಲ್ಲಿ, ಮದುಮಕ್ಕಳಿಬ್ಬರೂ ಯಾರು ಮೊದಲು ತಮ್ಮ ಜೀವನ ಸಂಗಾತಿಗೆ ಪುಷ್ಪಮಾಲೆ ಹಾಕಬೇಕು ಎಂಬ ವಿಚಾರದಲ್ಲಿ ಗೊಂದಲಕ್ಕೀಡಾಗಿರುವ ಈ ಮುದ್ದಾದ ಕ್ಷಣ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
https://www.youtube.com/watch?v=Cwq6FPiSNYQ