ಬಾತುಕೋಳಿಗಳು ಮನುಷ್ಯನ ಮಾತನ್ನು ಅನುಕರಿಸಲು ಪ್ರಯತ್ನ ಮಾಡುತ್ತವೆ ಎಂದು ಹೇಳಿದರೆ, ಅದು ನಿಮಗೆ ತಮಾಷೆಯಾಗಿ ಕಾಣಬಹುದು. ಲೈಡೆನ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ಸಂಶೋಧಕರು ನಡೆಸಿದ ಅಧ್ಯಯನವು, ಕೆಲವು ಜಲಪಕ್ಷಿಗಳು ಮಾನವನ ಭಾಷೆಯನ್ನು ಅನುಕರಿಸಲು ಪ್ರಯತ್ನಿಸುತ್ತವೆ ಎಂದು ಬಹಿರಂಗಪಡಿಸಿವೆ.
ಟಿಡ್ಬಿನ್ ಬಿಲ್ಲಾ ನೇಚರ್ ರಿಸರ್ವ್ ನಲ್ಲಿ ಬೆಳೆದ ಕಸ್ತೂರಿ ಬಾತುಕೋಳಿ, ‘ಯು ಬ್ಲಡಿ ಫೂಲ್’ ಎಂಬ ವಾಕ್ಯವನ್ನು ಪುನಾರವರ್ತಿಸುವುದನ್ನು ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ರಿಪ್ಪರ್ ಎಂದು ಹೆಸರಿಸಲಾದ ಬಾತುಕೋಳಿಯು ತನ್ನ ಉಸ್ತುವಾರಿಯೊಬ್ಬರು ಹೇಳುವ ಮಾತನ್ನು ಅನುಕರಿಸಲು ಶುರು ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ವಿಜಯಪುರದಲ್ಲಿ ದಾರುಣ ಘಟನೆ: ಜೆಸಿಬಿಗೆ ಸಿಲುಕಿ ಚಾಲಕ, ಪೌರ ಕಾರ್ಮಿಕ ಸಾವು
ಇನ್ನೊಂದು ಆಡಿಯೋ ಕ್ಲಿಪ್ ನಲ್ಲಿ ಬಾತುಕೋಳಿ, ಬಾಗಿಲು ತೆರೆಯುವ ಮತ್ತು ಮುಚ್ಚಿದ ಶಬ್ಧವನ್ನು ಅನುಕರಿಸಲಬಲ್ಲದು ಎಂಬುದನ್ನು ತಿಳಿಸುತ್ತದೆ.
ಇನ್ನು ಗಿಳಿಗಳು, ಯುರೋಪಿಯನ್ ಸ್ಟಾರ್ಲಿಂಗ್ ಗಳು, ಮೈನಾ ಹಕ್ಕಿಗಳು ಮತ್ತು ಬುಡ್ಗರಿಗರ್ಸ್ ಹಕ್ಕಿಗಳಂತೆ ಕಸ್ತೂರಿ ಬಾತುಕೋಳಿಗಳು ಗಾಯನ ಕಲಿಕೆಯ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನದ ಸಂಶೋಧನೆಗಳು ತಿಳಿಸಿವೆ.
https://www.youtube.com/watch?v=PLxTF2ZjKL4&feature=emb_logo