ಬಿಸಿಲಿನ ಧಗೆಯಿಂದ ಹೊರಗೆ ಹೋಗಿ ಬಂದರೆ ಸಾಕು ತಣ್ಣಗೆ ಏನಾದರೂ ಕುಡಿಯೋಣ ಅನ್ನಿಸುತ್ತೆ. ಆದರೆ ಮಿಲ್ಕ್ ಶೇಕ್, ಜ್ಯೂಸ್ ಗಳನ್ನು ಮಾಡೋಕೆ ಹೋದರೆ ಸ್ವಲ್ಪ ಹೊತ್ತಾದರೂ ಬೇಕೇ ಬೇಕು. ಆದರೆ ಎರಡೇ ನಿಮಿಷದಲ್ಲಿ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ಮಾಡೋ ವಿಧಾನವನ್ನು ನಾವು ನಿಮಗೆ ಹೇಳಿಕೊಡ್ತೀವಿ.
ಬೇಕಾಗುವ ಸಾಮಗ್ರಿ :
ಬಾದಾಮಿ – 15
ಗೋಡಂಬಿ – 15
ಒಣದಾಕ್ಷಿ – 15
ಖರ್ಜೂರ – 15
ಒಣ ಅಂಜೂರ – 4
ಕೆನೆ – 2 ಟೀ ಸ್ಪೂನ್
ಜೇನು ತುಪ್ಪ – 4 ಟೀ ಸ್ಪೂನ್
ಹಾಲು -1 ಕಪ್
ಮಾಡುವ ವಿಧಾನ :
ಮೇಲಿನ ಎಲ್ಲಾ ಒಣ ಹಣ್ಣುಗಳನ್ನು ಹಾಲಿನಲ್ಲಿ 3 ಗಂಟೆಗಳ ಕಾಲ ನೆನೆಸಿಡಿ. ನಂತರ ಕೆನೆ ಹಾಗೂ ಜೇನು ತುಪ್ಪದೊಂದಿಗೆ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಮಿಲ್ಕ್ ಶೇಕ್ ಕುಡಿಯಬೇಕೆನಿಸಿದಾಗ ತಣ್ಣನೆಯ ಹಾಲಿಗೆ ಎರಡು ಚಮಚ ಬೆರೆಸಿ ಕುಡಿಯಿರಿ. ಬೇಕೆನಿಸಿದರೆ ಸಕ್ಕರೆ ಹಾಕಿಕೊಳ್ಳಿ.