alex Certify ಮತ್ತೊಂದು ಶಾಕಿಂಗ್‌ ಘಟನೆ ಬಹಿರಂಗ; ವಿಮಾನದಲ್ಲಿ ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಶಾಕಿಂಗ್‌ ಘಟನೆ ಬಹಿರಂಗ; ವಿಮಾನದಲ್ಲಿ ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ

ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆ ಮತ್ತು ಕುಡಿದು ಅಸಭ್ಯವಾಗಿ ವರ್ತಿಸುವ ಘಟನೆಗಳು ನಿರಂತರವಾಗಿ ವರದಿಯಾಗ್ತಿದ್ದು ಇಂತಹ ಪ್ರಕರಣಗಳಿಗೆ ಮತ್ತೊಂದು ಘಟನೆ ಸೇರ್ಪೆಡೆಯಾಗಿ ಈಗ ಬೆಳಕಿಗೆ ಬಂದಿದೆ.

ಗುವಾಹಟಿಯಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕುಡಿದ ಪ್ರಯಾಣಿಕನೊಬ್ಬ ವಾಂತಿ ಮಾಡಿದ್ದಾನೆ. ಇಷ್ಟೇ ಅಲ್ಲದೇ ವಿಮಾನದ ಶೌಚಾಲಯದ ಸುತ್ತಲೂ ಮಲ ವಿಸರ್ಜನೆ ಮಾಡಿದ್ದಾನೆ.

ಮಾರ್ಚ್ 26 ರಂದು ಇಂಡಿಗೋ ಫ್ಲೈಟ್ 6E 762 ನಲ್ಲಿ ಪ್ರಯಾಣಿಕನ ಇಂತಹ ಅಸಭ್ಯ ವರ್ತನೆಯ ನಂತರ ವಿಮಾನದಲ್ಲಿದ್ದ ಗಗನಸಖಿಯರು ಅದನ್ನು ಸ್ವಚ್ಛಗೊಳಿಸಬೇಕಾಯಿತು.

ಈ ಘಟನೆಯನ್ನು ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ವಿಮಾನ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್ ಕುಡಿದ ಪ್ರಯಾಣಿಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...