ಮದ್ಯಪಾನ ಮಾಡಿ ಅಮಲೇರಿದ್ದ ಸ್ಥಿತಿಯಲ್ಲಿದ್ದ ಪ್ರವಾಸಿಗನೊಬ್ಬ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದು, ಜೈಲು ಶಿಕ್ಷೆಯ ಭೀತಿ ಎದುರಾಗಿದೆ. ಜನರಿಗೆ ತೊಂದರೆ ನೀಡಿ ರಂಪಾಟ ಮಾಡಿದ ಆರೋಪದ ಮೇಲೆ ಇಂಡೋನೇಷ್ಯಾದಲ್ಲಿ ಆಸ್ಟ್ರೇಲಿಯಾದ ಪ್ರಜೆಯನ್ನು ಬಂಧಿಸಲಾಗಿದ.
ದಕ್ಷಿಣ ಕ್ವೀನ್ಸ್ ಲ್ಯಾಂಡ್‌ನ ನೂಸಾದಿಂದ ಬಂದಿರುವ 23 ವರ್ಷದ ಬೋಧಿ ಮಣಿ ರಿಸ್ಬಿ-ಜೋನ್ಸ್ ಎಂಬಾತನನ್ನು ಇಂಡೋನೇಷ್ಯಾ ಅಧಿಕಾರಿಗಳು ಸ್ಥಳೀಯ ಮೀನುಗಾರರ ಮೇಲೆ ಕುಡಿದಿದ್ದಾಗ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಆತ ಈಗ ಸಾರ್ವಜನಿಕವಾಗಿ ಥಳಿತಕ್ಕೊಳಗಾಗುವ ಮತ್ತು ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
ಅಧಿಕಾರಿಗಳ ಪ್ರಕಾರ ಆತ ಮೀನುಗಾರನೊಬ್ಬ ಬೈಕ್ ಮೇಲೆ ಹೋಗುತ್ತಿದ್ದಾಗ ದಾಳಿ ಮಾಡಿದ್ದ. ಬೈಕ್ ನಿಂದ ಬಿದ್ದಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಪಾದಕ್ಕೆ 50 ಹೊಲಿಗೆ ಹಾಕಲಾಗಿದೆ. ಸ್ಥಳೀಯ ಹಳ್ಳಿಯ ನಿವಾಸಿಗಳನ್ನು ಬೆನ್ನಟ್ಟುವ ಮತ್ತು ಹೊಡೆಯುವ ಮೊದಲು ಆಸ್ಟೇಲಿಯಾದ ಪ್ರವಾಸಿ ರೆಸಾರ್ಟ್‌ನ ಭದ್ರತಾ ಸಿಬ್ಬಂದಿಯನ್ನು ಥಳಿಸಿದ್ದನು. ಘಟನಾ ಸ್ಥಳದಲ್ಲಿದ್ದ ಜನರ ಪ್ರಕಾರ, ಅವನು ತನ್ನ ಕೋಣೆಯಿಂದ ಸಂಪೂರ್ಣವಾಗಿ ಬೆತ್ತಲೆಯಾಗಿ ಹೊರಬಂದಿದ್ದನು.