ಗಗನಸಖಿಯೊಬ್ಬಳು ತನ್ನ ಮೂವರು ಸ್ನೇಹಿತರ ಜೊತೆಗೆ ಅಮಲೇರಿದ ಪರಿಸ್ಥಿತಿಯಲ್ಲಿ ರೆಸ್ಟೊರೆಂಟ್ನಲ್ಲಿ ಗಲಾಟೆ ಆಡಿ ರಂಪಾಟ ನಡೆಸಿದ ಪ್ರಸಂಗ ನಡೆದಿದೆ.
ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಪ್ರಾಚಿ ಸಿಂಗ್ ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ರೆಸ್ಟೋರೆಂಟ್ನಲ್ಲಿ ಒಂದು ಕುಟುಂಬದೊಟ್ಟಿಗೆ ಜಗಳವಾಡಿದ್ದು, ರೆಸ್ಟೊರೆಂಟ್ನಿಂದ ಹೊರಬಂದ ಬಳಿಕ ಬಿಯರ್ ಬಾಟಲಿಯಿಂದ ಆ ಕುಟುಂಬದವರ ಕಾರಿನ ಗಾಜು ಒಡೆದಿದ್ದಾಳೆ.
ಕುಟುಂಬದವರ ದೂರಿನ ಮೇರೆಗೆ ಪ್ರಾಚಿ ಸಿಂಗ್, ಆಕೆಯ ಪತಿ ಕಾರ್ತಿಕ್ ಚೌಧರಿ, ವಿಕಾಸ್ ಖಂಡೇಲ್ವಾಲ್ ಮತ್ತು ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಶಾಂತಿ ಭಂಗದ ಆರೋಪದ ಮೇಲೆ ಪೊಲೀಸರು ವಿಶಾಲ್ ದುಬೆ ಮತ್ತು ಆರ್ಯ ಅವರನ್ನು ಎದುರು ಗುಂಪಿನಿಂದ ಬಂಧಿಸಿದ್ದಾರೆ.