
ಭಾರತಕ್ಕೆ ನಿರ್ಗಮಿಸುವ ಮುನ್ನ, ಪ್ರಧಾನಿ ಮೋದಿಯವರನ್ನು ಸ್ಕಾಟ್ಲೆಂಡ್ನ ಭಾರತೀಯ ಸಮುದಾಯದ ಜನತೆ ಡ್ರಮ್ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ಬಾರಿಸುತ್ತಾ ಹಷೋದ್ಗಾರ ವ್ಯಕ್ತಪಡಿಸಿದ್ರು. ಅನೇಕರು ಭಾರತೀಯ ಸಾಂಪ್ರದಾಯಿಕ ಉಡುಗೆ ಹಾಗೂ ಪೇಟ ಧರಿಸಿದ್ದೂ ಸಹ ಕಂಡು ಬಂತು.
ಭಾರತೀಯ ಸಮುದಾಯದ ಸದಸ್ಯರ ಜೊತೆ ಕೈಕುಲುಕಿ ಮಾತನಾಡಿದ್ದು ಮಾತ್ರವಲ್ಲದೇ ಪ್ರಧಾನಿ ಮೋದಿ ಡ್ರಮ್ನ್ನೂ ಬಾರಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಪ್ರಧಾನಿ ಮೋದಿ ಭಾರತದ ಆಭರಣ ಎಂದು ಸ್ಕಾಟ್ಲೆಂಡ್ನ ಭಾರತೀಯ ಸಮುದಾಯದವರು ಘೋಷಣೆ ಕೂಗುತ್ತಿದ್ದ ವಿಡಿಯೋ ಕೂಡ ಇದೇ ರೀತಿ ವೈರಲ್ ಆಗಿತ್ತು.