ಬೆಂಗಳೂರು: ಡ್ರಗ್ಸ್, ಚಿನ್ನ ಸೇರಿದಂತೆ ಕಳ್ಳ ಮಾರ್ಗದ ಮೂಲಕ ಸರಬರಾಜು ಮಾಡುವವರು ಹಲವಾರು ರೀತಿಯ ಚಾಕಚಕ್ಯತೆ ಉಪಯೋಗಿಸಿದರೂ ಕೆಲವೊಮ್ಮೆ ಸಿಕ್ಕಿಬೀಳುತ್ತಾರೆ. ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಡ್ರಗ್ಸ್ ಸರಬರಾಜು ಮಾಡುವವರು ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯೊಬ್ಬರಿಂದ 5 ಕೆಜಿಗೂ ಹೆಚ್ಚು ಎಫೆಡ್ರಿನ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. 43 ಮದುವೆಯ ಆಮಂತ್ರಣ ಕಾರ್ಡ್‌ಗಳಲ್ಲಿ ಇದನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಘಟನೆ ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಹಳೆಯ ವಿಡಿಯೋ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ವೈರಲ್ ಅಗುತ್ತಿದೆ.
ವೈರಲ್ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. “ವಿಮಾನ ನಿಲ್ದಾಣದಲ್ಲಿ ಮದುವೆ ಕಾರ್ಡ್ ಹೊಂದಿರುವ ಹುಡುಗಿ ಸಿಕ್ಕಿಬಿದ್ದಿದ್ದಾಳೆ. ಕಾರ್ಡ್‌ಗಳು ಡ್ರಗ್ಸ್ ಒಳಗೊಂಡಿದ್ದವು. ಜಾಗರೂಕರಾಗಿರಿ…… ವಿಮಾನ ನಿಲ್ದಾಣದಲ್ಲಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನಿಮಗೂ ಅಪಾಯ, ಸಿಕ್ಕಿಬೀಳುವಿರಿ” ಎಂದಿದ್ದಾರೆ.