ಮಂಗಳೂರು: ಗೋವಾದಿಂದ ಮಂಗಳೂರು ನಗರಕ್ಕೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ನೈಜೇರಿಯಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಾದಲ್ಲಿ ವಾಸವಾಗಿದ್ದ ಮೈಕೆಲ್ ಒಕಾಫರ್ ಓಡಿಕ್ಪೋ (44) ಬಂಧಿತ ಆರೋಪಿ. 2024ರ ಮಾರ್ಚ್ ನಲ್ಲಿ ಉಳ್ಳಾಲದ ಅಂಬ್ಲಮೊಗರು ಗ್ರಾಮದ ಇಬ್ಬರು ದ್ವಿಚಕ್ರವಾಹನದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದರು. ಬಂಧಿತರ ಬಳಿ ಕೊಕೇನ್ ಬಂದಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳು ಗೋವಾದಲ್ಲಿದ್ದ ಮೈಕೆಲ್ ಬಗ್ಗೆ ಮಾಹಿತಿ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಉತ್ತರ ಗೋವಾದ ಕಾಲನ್ ಗೂಟ್ ಗೆ ತೆರಳಿ ಆರೋಪಿ ಮೈಕೆಲ್ ನನ್ನು ಬಂಧಿಸಿದ್ದಾರೆ. 30 ಗ್ರಾಂ ಕೊಕೇನ್, ಸಾಗಾಟಕ್ಕೆ ಉಪಯೋಗಿಸುತ್ತಿದ್ದ ಕಾರು, ಎರಡು ಮೊಬೈಲ್, 4500 ರೂಪಾಯಿ ನಗದು ಹಣ ಜಪ್ತಿ ಮಾಡಿದ್ದಾರೆ.