
ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸ್ ಬಾನೆಟ್‌ಗೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸಂಚಾರ ನಿಯಮ ಉಲ್ಲಂಘನೆಗಾಗಿ ಟ್ರಾಫಿಕ್ ಪೊಲೀಸರು ಕಾರನ್ನು ನಿಲ್ಲಿಸಿದ್ದರು. ಆದರೆ ಕಾರಿನ ಚಾಲಕ ಪೊಲೀಸರನ್ನು ಓಡಿಸಲು ಯತ್ನಿಸಿದ್ದಾನೆ. ಪೊಲೀಸ್ ಮೇಲೆ ಕಾರು ಹರಿಸಿದಾಗ ಕಾರಿನ ಬಾನೆಟ್ ಮೇಲೆ ಪೊಲೀಸ್ ನೇತಾಡುತ್ತಿದ್ದು, ಸುಮಾರು 4 ಕಿಲೋಮೀಟರ್ ದೂರ ಹೋಗಿರುವ ಘಟನೆ ನಡೆದಿದೆ. ನಂತರ, ಪೊಲೀಸರು ಕಾರು ಚಾಲಕನಿಂದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಕಾರು ಪೊಲೀಸರನ್ನು ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
“ಫೋನ್‌ನಲ್ಲಿ ಮಾತನಾಡುತ್ತಾ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನಾನು ನಿಲ್ಲಿಸಿದೆ. ನಾನು ಚಲನ್ ಪಾವತಿಸುವಂತೆ ಕೇಳಿದೆ. ಆದರೆ ಅವನು ಪಾವತಿಸಲು ನಿರಾಕರಿಸಿದನು ಮತ್ತು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು” ಎಂದು ಟ್ರಾಫಿಕ್ ಪೊಲೀಸ್ ಶಿವಸಿಂಗ್ ಚೌಹಾಣ್ ಹೇಳಿದ್ದಾರೆ. ಆರೋಪಿಯನ್ನು ಗ್ವಾಲಿಯರ್ ನಗರದ ನಿವಾಸಿ ಕೇಶವ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.