ಬ್ರೇಕ್ ಪೆಡಲ್ ಬದಲಿಗೆ ಆಕ್ಸಿಲರೇಟರ್ ಪೆಡಲ್ ಮೇಲೆ ಚಾಲಕ ಕಾಲಿಟ್ಟಲ್ಲಿ ಆ ವಾಹನ ಅಪಘಾತಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ.
ನಾಲ್ಕು ಚಕ್ರದ ವಾಹನ ಚಾಲನೆ ಮಾಡಲು ಕಲಿಯುವ ಪ್ರತಿಯೊಬ್ಬರೂ ಆರಂಭದಲ್ಲಿ ಮಾಡಬಲ್ಲ ಅತ್ಯಂತ ಸಾಮಾನ್ಯ ತಪ್ಪು ಇದಾಗಿದೆ. ಆದರೆ ಈ ತಪ್ಪಿನಿಂದ ಮಾರಣಾಂತಿಕ ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳು ಬಹಳಷ್ಟಿವೆ.
ದುಬಾರಿ ಕಾರುಗಳಲ್ಲಿ ಹೀಗೆ ಮಾಡಿಕೊಂಡು ಅದಕ್ಕೆ ಏನಾದರೂ ಹಾನಿಯಾದಲ್ಲಿ ಆಗ ಮಾಲೀಕರಿಗೆ ಆಗುವ ನೋವು ಅಷ್ಟಿಷ್ಟಲ್ಲ. ಇಂಥದ್ದೇ ನೋವೊಂದನ್ನು ಮರ್ಸಿಡಿಸ್ ಕಾರೊಂದರ ಮಾಲೀಕರು ಅನುಭವಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್; SIT ರಚನೆಯೇ ದೋಷಪೂರಿತ ಎಂದ ಯುವತಿ ಪರ ವಕೀಲೆ; ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದ ಹೈಕೋರ್ಟ್
ಇಂಥದ್ದೇ ಒಂದು ತಪ್ಪಿನಿಂದಾಗಿ, 25,000 ಪೌಂಡ್ ಮೌಲ್ಯದ (24 ಲಕ್ಷ ರೂಪಾಯಿ) ಮರ್ಸಿಡಿಸ್‌ನ ಎ-ಕ್ಲಾಸ್ ಸ್ವಯಂಚಾಲಿತ ಕಾರೊಂದರ ಚಾಲಕ ರಿವರ್ಸ್ ಚಾಲನೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ವಾಹನವನ್ನು ಕಸದ ಬುಟ್ಟಿಯೊಂದಕ್ಕೆ ಗುದ್ದಿದ್ದಾನೆ.
ಘಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರು ಥರಾವರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.