alex Certify ಕಸದ ಬುಟ್ಟಿಗೆ 24 ಲಕ್ಷ ರೂ. ಮೌಲ್ಯದ ಹೊಚ್ಚಹೊಸ ಕಾರು ಡಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸದ ಬುಟ್ಟಿಗೆ 24 ಲಕ್ಷ ರೂ. ಮೌಲ್ಯದ ಹೊಚ್ಚಹೊಸ ಕಾರು ಡಿಕ್ಕಿ

ಬ್ರೇಕ್ ಪೆಡಲ್ ಬದಲಿಗೆ ಆಕ್ಸಿಲರೇಟರ್‌ ಪೆಡಲ್‌ ಮೇಲೆ ಚಾಲಕ ಕಾಲಿಟ್ಟಲ್ಲಿ ಆ ವಾಹನ ಅಪಘಾತಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ.

ನಾಲ್ಕು ಚಕ್ರದ ವಾಹನ ಚಾಲನೆ ಮಾಡಲು ಕಲಿಯುವ ಪ್ರತಿಯೊಬ್ಬರೂ ಆರಂಭದಲ್ಲಿ ಮಾಡಬಲ್ಲ ಅತ್ಯಂತ ಸಾಮಾನ್ಯ ತಪ್ಪು ಇದಾಗಿದೆ. ಆದರೆ ಈ ತಪ್ಪಿನಿಂದ ಮಾರಣಾಂತಿಕ ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳು ಬಹಳಷ್ಟಿವೆ.

ದುಬಾರಿ ಕಾರುಗಳಲ್ಲಿ ಹೀಗೆ ಮಾಡಿಕೊಂಡು ಅದಕ್ಕೆ ಏನಾದರೂ ಹಾನಿಯಾದಲ್ಲಿ ಆಗ ಮಾಲೀಕರಿಗೆ ಆಗುವ ನೋವು ಅಷ್ಟಿಷ್ಟಲ್ಲ. ಇಂಥದ್ದೇ ನೋವೊಂದನ್ನು ಮರ್ಸಿಡಿಸ್ ಕಾರೊಂದರ ಮಾಲೀಕರು ಅನುಭವಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್; SIT ರಚನೆಯೇ ದೋಷಪೂರಿತ ಎಂದ ಯುವತಿ ಪರ ವಕೀಲೆ; ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದ ಹೈಕೋರ್ಟ್

ಇಂಥದ್ದೇ ಒಂದು ತಪ್ಪಿನಿಂದಾಗಿ, 25,000 ಪೌಂಡ್ ಮೌಲ್ಯದ (24 ಲಕ್ಷ ರೂಪಾಯಿ) ಮರ್ಸಿಡಿಸ್‌‌ನ ಎ-ಕ್ಲಾಸ್‌ ಸ್ವಯಂಚಾಲಿತ ಕಾರೊಂದರ ಚಾಲಕ ರಿವರ್ಸ್ ಚಾಲನೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ವಾಹನವನ್ನು ಕಸದ ಬುಟ್ಟಿಯೊಂದಕ್ಕೆ ಗುದ್ದಿದ್ದಾನೆ.

ಘಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇ‌ರ್‌ ಮಾಡಲಾಗಿದ್ದು, ನೆಟ್ಟಿಗರು ಥರಾವರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.

May be an image of car and road

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...