ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…?
ಹಾಲಿನೊಂದಿಗೆ ಬೆಲ್ಲ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಲಭ್ಯವಾಗುತ್ತದೆ. ರಕ್ತ ಶುದ್ಧವಾಗುತ್ತದೆ ಮಾತ್ರವಲ್ಲ ದೇಹದಲ್ಲಿ ಶಕ್ತಿ ವೃದ್ಧಿಸುತ್ತದೆ. ಹಾಗಾಗಿ ಮಲಗುವ ಮುನ್ನ ಕುಡಿಯುವ ಹಾಲಿಗೆ ತುಸು ಬೆಲ್ಲ ಬೆರೆಸಿ ಕುಡಿಯಿರಿ.
ಬೆಲ್ಲವನ್ನು ರಾತ್ರಿ ವೇಳೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಬೆಲ್ಲ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವ ಸಂದರ್ಭವನ್ನು ತಪ್ಪಿಸುತ್ತದೆ.
ಮಕ್ಕಳಿಗೆ ಹೀಗೆ ಕುಡಿಯಲು ಕೊಡುವುದರಿಂದ ಅವರಿಗೆ ಹಿಮೋಗ್ಲೋಬಿನ್ ಸಮಸ್ಯೆ ಕಾಡುವುದಿಲ್ಲ. ಹಿರಿಯರ ಕಾಲು ಕೀಲು ನೋವುಗಳು ದೂರವಾಗುತ್ತವೆ. ಇದರೊಂದಿಗೆ ತುಸು ಶುಂಠಿ ಪುಡಿಯನ್ನು ಬೆರೆಸಿ ಕುಡಿದರೆ ಕೆಮ್ಮಿನ ಸಮಸ್ಯೆಯೂ ಇಲ್ಲವಾಗುತ್ತದೆ.