ಸಕ್ಕರೆಯ ಬದಲಾಗಿ ಬೆಲ್ಲವನ್ನ ಅಡುಗೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಕಬ್ಬಿನಿಂದ ತಯಾರು ಮಾಡುವ ಈ ಬೆಲ್ಲವು ಸಕ್ಕರೆಗೆ ಹೋಲಿಸಿದ್ರೆ ಆರೋಗ್ಯಕ್ಕೆ ತುಂಬಾನೇ ಉಪಕಾರಿ. ವಿಶ್ವದಲ್ಲಿ ಶೇಕಡಾ 70ರಷ್ಟು ಬೆಲ್ಲವನ್ನ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತೆ.
ಈ ಬೆಲ್ಲವನ್ನ ಬೆಚ್ಚನೆಯ ನೀರಿನಲ್ಲಿ ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಉಪಯೋಗ ಇದೆ.
ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ : ಬೆಲ್ಲದಲ್ಲಿ ಬಿ1, ಬಿ6 ಹಾಗೂ ಸಿ ಪ್ಲಸ್ ಜೀವಸತ್ವಗಳು ಅಗಾಧ ಪ್ರಮಾಣದಲ್ಲಿದೆ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚನೆಯ ನೀರಿಗೆ ಬೆಲ್ಲವನ್ನ ಮಿಶ್ರಣ ಮಾಡಿ ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಶಕ್ತಿ ಹೆಚ್ಚಲಿದೆ.
ತೂಕ ಇಳಿಸಲು ಸಹಕಾರಿ : ಸಿಹಿ ತಿಂಡಿಗಳನ್ನ ತಿನ್ನೋದ್ರಿಂದ ದೇಹದ ತೂಕ ಹೆಚ್ಚಾಗುತ್ತೆ ಅಂತಾರೆ. ಆದರೆ ಈ ಬೆಲ್ಲದ ನೀರು ಸೇವನೆ ಮಾಡೋದ್ರಿಂದ ದೇಹದಲ್ಲಿ ತೂಕ ಇಳಿಕೆಯಾಗಲಿದೆ. ಬೆಲ್ಲದಲ್ಲಿರುವ ಪೋಟ್ಯಾಶಿಯಂ ಅಂಶ ದೇಹದಲ್ಲಿ ಎಲೆಕ್ಟ್ರೋಲೈಟ್ ಅಂಶವನ್ನ ಸರಿದೂಗಿಸುತ್ತೆ.
ಅನೀಮಿಯಾ ವಿರುದ್ಧ ಪರಿಣಾಮಕಾರಿ : ನಿಮ್ಮ ರಕ್ತ ಕಣದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿದ್ದರೆ ಈ ಬೆಲ್ಲದ ನೀರು ಸೇವನೆ ಮಾಡೋದ್ರಿಂದ ಅನೀಮಿಯಾ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.
ಸಂಧಿವಾತ ಸಮಸ್ಯೆಯಿಂದ ಮುಕ್ತಿ : ಬೆಲ್ಲದ ಸೇವನೆಯಿಂದ ದೇಹದಲ್ಲಿರುವ ಮೂಳೆಗಳಿಗೆ ಶಕ್ತಿ ಹೆಚ್ಚುತ್ತೆ, ಸಂಧಿವಾತದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.
ರಕ್ತದೊತ್ತಡ ಸಮಸ್ಯೆಗೆ ಪರಿಹಾರ : ಬೆಲ್ಲದಲ್ಲಿರುವ ಪೋಟ್ಯಾಶಿಯಂ ಹಾಗೂ ಸೋಡಿಯಂ ಅಂಶ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡಬಲ್ಲುದು. ಹೀಗಾಗಿ ಬೆಚ್ಚನೆಯ ನೀರಿನೊಂದಿಗೆ ಬೆಲ್ಲವನ್ನ ಸೇವಿಸೋದು ಒಳ್ಳೆಯದು.