ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಯಾಗ್ತವೆ. ದೌರ್ಬಲ್ಯ, ಆಯಾಸ, ಮೂಳೆಗಳಲ್ಲಿ ನೋವು ಸಾಮಾನ್ಯ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣ.
ಕೆಲ ಆಹಾರ ಸೇವನೆ ಮೂಲಕ ಈ ಸಮಸ್ಯೆಯಿಂದ ದೂರವಾಗಬಹುದು. ಕ್ಯಾಲ್ಸಿಯಂ ಕೊರತೆ ನೀಗಿಸಲು ಎರಡು ಆಹಾರವನ್ನು ದಿನನಿತ್ಯ ಸೇವನೆ ಮಾಡಬೇಕು.
ಬಾದಾಮಿ ಮತ್ತು ಎಳ್ಳು ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬಾದಾಮಿಯನ್ನು 1 ಗಂಟೆ ಅಥವಾ ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಬಾದಾಮಿಯ ಸಿಪ್ಪೆಯನ್ನು ತೆಗೆಯಬೇಕು. ಎಳ್ಳನ್ನು ಬಾಣಲೆಯಲ್ಲಿ 3-4 ನಿಮಿಷಗಳ ಕಾಲ ಹುರಿಯಬೇಕು. ಅದನ್ನು ಮಿಕ್ಸಿಯಲ್ಲಿ ರುಬ್ಬಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಬೇಕು. ಒಂದು ಚಮಚ ಎಳ್ಳನ್ನು ಹಾಲಿನಲ್ಲಿ ಕುದಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರದ ಜೊತೆ ಸೇವಿಸಬೇಕು. ಇದರೊಂದಿಗೆ ಸುಲಿದ ಬಾದಾಮಿಯನ್ನು ತಿನ್ನಬೇಕು.
ಹಾಲು ಇಷ್ಟಪಡುವವರು, ಉಗುರು ಬೆಚ್ಚಗಿನ ಹಾಲನ್ನು ಕುಡಿಯಬಹುದು. ಬಾದಾಮಿಯಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, ಒಮೆಗಾ 3, ಉತ್ಕರ್ಷಣ ನಿರೋಧಕ ಗುಣಗಳಿವೆ. ಇದನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ಎಳ್ಳಿನಲ್ಲಿ ಸತು, ನಾರಿನಂಶ, ತಾಮ್ರ, ವಿಟಮಿನ್ ಇ, ಬಿ 6, ಕಬ್ಬಿಣ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಉತ್ಕರ್ಷಣ ನಿರೋಧಕಗಳಿವೆ.
ಬಾದಾಮಿ, ಎಳ್ಳಿನ ಸೇವನೆಯಿಂದ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಕೀಲುಗಳು, ಬೆನ್ನು ಮತ್ತು ಮೊಣಕಾಲುಗಳ ನೋವನ್ನು ನಿವಾರಿಸುತ್ತದೆ. ಹಲ್ಲುಗಳು ಬಲಗೊಳ್ಳುತ್ತವೆ. ಕರುಳಿನ ಕ್ಯಾನ್ಸರ್ ಅಪಾಯವು ಕಡಿಮೆಯಾಗುತ್ತದೆ. ಪ್ರತಿದಿನ 1 ಚಮಚ ಎಳ್ಳನ್ನು ಸೇವಿಸುವುದರಿಂದ ದೇಹವು 100 ಮಿಲಿಗ್ರಾಂ ಕ್ಯಾಲ್ಸಿಯಂ ಪಡೆಯುತ್ತದೆ.
ಬಾದಾಮಿ ಮತ್ತು ಎಳ್ಳು ಬೀಜಗಳಲ್ಲಿ ಕಬ್ಬಿಣವಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆ ನಿವಾರಣೆಯಾಗುತ್ತದೆ. ಬಾದಾಮಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಅಧಿಕವಾಗಿದೆ. ದೃಷ್ಟಿ ದೋಷ ಕಡಿಮೆಯಾಗುತ್ತದೆ. ಆಯಾಸ, ದೌರ್ಬಲ್ಯ, ನಿದ್ರಾಹೀನತೆ ದೂರವಾಗುತ್ತದೆ. ಕೂದಲಿಗೆ ಪೋಷಣೆ ಸಿಗುತ್ತದೆ. ಚರ್ಮ ಹೊಳಪು ಪಡೆಯುತ್ತದೆ.