ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕೀಲು ನೋವು, ಗಂಟು ನೋವು, ಹಲ್ಲುಗಳಲ್ಲಿ ಸಮಸ್ಯೆ ಕಂಡುಬರುವುದು ಸಾಮಾನ್ಯ. ಇದರ ನಿವಾರಣೆಗೆ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ತಯಾರಿಸಬಹುದು.
ವಿಪರೀತ ಸುಸ್ತು, ಶಕ್ತಿಹೀನತೆ, ಆಲಸ್ಯ, ಏಕಾಗ್ರತೆ ಕೊರತೆಯಂಥ ಲಕ್ಷಣಗಳು ಕಂಡು ಬಂದರೆ ನಿಮಗೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂದರ್ಥ. ಈ ಒಂದು ಪಾನೀಯವನ್ನು ನಿತ್ಯ ಕುಡಿಯುವ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಬಹುದು. ಅದನ್ನು ತಯಾರಿಸುವುದು ಹೇಗೆ ನೋಡೋಣ.
ಇದಕ್ಕೆ ಗಸೆಗಸೆ, ತುಪ್ಪ ಹಾಗೂ ಹಾಲು ಬೇಕು. ಮೊದಲು ಗಸೆಗಸೆಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ಒಂದು ಲೋಟ ಹಾಲನ್ನು ಕಾಯಿಸಿ. ಅದಕ್ಕೆ ಈ ಹುರಿದಿಟ್ಟ ಗಸೆಗಸೆಯನ್ನು ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಸಕ್ಕರೆ ಬಳಸಿ. ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವಾರದೊಳಗೆ ನಿಮ್ಮ ಕ್ಯಾಲ್ಸಿಯಂ ಕೊರತೆ ಸಮಸ್ಯೆ ದೂರವಾಗುತ್ತದೆ.
ಸಾಕಷ್ಟು ಪ್ರಮಾಣದಲ್ಲಿ ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ಬಳಸುವುದೂ ಬಹಳ ಮುಖ್ಯ. ಮಲಗುವ ಮುನ್ನ ಒಂದು ಲೋಟ ದಪ್ಪನೆಯ ಹಾಲು ಕುಡಿದು ಮಲಗಿ. ನಿಮ್ಮ ಎಲುಬು ಸ್ಟ್ರಾಂಗ್ ಆಗಲು ಇಷ್ಟು ಸಾಕು.