ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸರಿಯಾಗಿ, ನೀರು, ಹಣ್ಣುಗಳನ್ನು ಸೇವಿಸಬೇಕು. ಇದರಿಂದ ಚರ್ಮ ತೇವಾಂಶದಿಂದ ಕೂಡಿದ್ದು, ಸಮಸ್ಯೆಗಳು ದೂರವಾಗುತ್ತದೆ. ಹಾಗೇ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಚರ್ಮ ಹೊಳೆಯುವಂತೆ ಮಾಡಲು ಚಳಿಗಾಲದಲ್ಲಿ ಟೊಮೆಟೊ, ಶುಂಠಿಯಿಂದ ತಯಾರಿಸಿದ ಈ ಪಾನೀಯವನ್ನು ಸೇವಿಸಿ.
1 ಇಂಚು ಶುಂಠಿ, 2 ಚಮಚ ತಾಜಾ ಕೊತ್ತಂಬರಿ ಮತ್ತು ಮಧ್ಯಮ ಗಾತ್ರದ 1 ಟೊಮೆಟೊ ಇವಿಷ್ಟನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಪ್ರತಿದಿನ ಸೇವಿಸಿ. ಟೊಮೆಟೊದಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ವಿಟಮಿನ್ ಕೆ ಮುಂತಾದ ಪೌಷ್ಟಿಕಾಂಶವಿದ್ದು, ಇದು ಮೇದೋಗ್ರಂಥಿಯ ಸ್ರಾವವನ್ನು ತಡೆಯುತ್ತದೆ.
ಟೊಮೆಟೊಗಳಲ್ಲಿ ಬ್ಲಿಚಿಂಗ್ ಗುಣಗಳಿದ್ದು ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ. ಶುಂಠಿ ಚರ್ಮ ಮತ್ತು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.