ಹೆಚ್ಚಿನವರಿಗೆ ಬೆಳಿಗ್ಗಿನ ಸಮಯದಲ್ಲಿ ಟೀ, ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದರ ಬದಲು ಬೆಳಿಗ್ಗಿನ ವೇಳೆಯಲ್ಲಿ ಹಣ್ಣುಗಳ ಮತ್ತು ತರಕಾರಿಗಳ ಜ್ಯೂಸ್ ಗಳನ್ನು ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚಾಗುವುದರ ಜೊತೆಗೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.
* ಸೌತೆಕಾಯಿ ಜ್ಯೂಸ್ : ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲಗೊಳಿಸಲು ಸಹಾಯ ಮಾಡುತ್ತದೆ.
*ಟೊಮೆಟೊ ಜ್ಯೂಸ್ : ಟೊಮೆಟೊದಲ್ಲಿರುವ ಅಂಶ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತದೆ. ಇದು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಇದರಿಂದ ಚರ್ಮದ ಕಾಂತಿ ಹಚ್ಚಾಗುತ್ತದೆ.
*ಸೋರೆಕಾಯಿ ಜ್ಯೂಸ್ : ಈ ಜ್ಯೂಸ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ದೇಹವನ್ನು ತಂಪಾಗಿಸುತ್ತದೆ. ಬಿಸಿಲಿನಿಂದ ಚರ್ಮ ಮತ್ತು ಕೂದಲನ್ನು ಕಾಪಾಡುತ್ತದೆ.