ನೀರು ಕಡಿಮೆ ಕುಡಿಯುವುದು ಉರಿಮೂತ್ರಕ್ಕೆ ಮೊದಲ ಕಾರಣ. ಈ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಸಾಕು, ನಿಮ್ಮನ್ನು ಬಹುಕಾಲದ ವರೆಗೆ ಬಿಡದೆ ಕಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳಿವೆ.
ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಿರಿ. ಚಳಿ ಅಥವಾ ಎಸಿಯಲ್ಲಿ ಕುಳಿತಿದ್ದೀರಿ ಎಂಬ ಕಾರಣಕ್ಕೆ ನೀರು ಕುಡಿಯುವುದನ್ನು ಮರೆಯದಿರಿ. ನೀರು ಹೆಚ್ಚು ಕುಡಿದಷ್ಟು ಕಲ್ಮಶಗಳು ಮೂತ್ರ ರೂಪದಲ್ಲಿ ದೇಹದಿಂದ ಹೊರಗೆ ಹೋಗುತ್ತವೆ. ಮತ್ತು ಸಮಸ್ಯೆಗಳನ್ನು ಸೃಷ್ಟಿಸುವುದನ್ನು ಕಡಿಮೆ ಮಾಡುತ್ತದೆ.
ಹಾಲು ಕುಡಿಯುವುದರಿಂದಲೂ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ದೇಹವನ್ನು ತಂಪಾಗಿಡುವ ಹಾಲಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದು ಇದು ಉರಿಮೂತ್ರ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.
ಬೆಲ್ಲವನ್ನು ಒಂದಿಲ್ಲೊಂದು ರೂಪದಲ್ಲಿ ಸೇವಿಸಿ. ಅಡುಗೆಗೆ, ಕಷಾಯಕ್ಕೆ ಅಥವಾ ಬಿಸಿನೀರಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ರಕ್ತ ಶುದ್ಧಿಯಾಗುತ್ತದೆ. ಮೂಳೆಗಳು ಬಲವಾಗುತ್ತವೆ. ಎಳನೀರು, ಸೌತೆಕಾಯಿ, ಸೋರೆಕಾಯಿ ಹಾಗೂ ಕಲ್ಲಂಗಡಿ ಹಣ್ಣನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ಈ ಸಮಸ್ಯೆಗಳು ಕಾಡುವುದಿಲ್ಲ.