ಹಾಲು ಆರೋಗ್ಯಕ್ಕೆ ಉತ್ತಮ. ಆದರೆ ಕೆಲವು ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕೆ ವಿವಿಧ ರೀತಿಯ ಪದಾರ್ಥಗಳನ್ನು ಬೆರೆಸಿ ಕುಡಿಸಿ. ಇದರಿಂದ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವ ಜೊತೆಗೆ ಮಕ್ಕಳ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ.
*ಏಲಕ್ಕಿ ಆರೋಗ್ಯಕ್ಕೆ ಉತ್ತಮ. ಇದನ್ನು ಹಾಲಿಗೆ ಸೇರಿಸುವುದರಿಂದ ಹಾಲಿನ ರುಚಿ ಹೆಚ್ಚಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದಂತಹ ಹಲವು ಪೋಷಕಾಂಶಗಳಿರುತ್ತದೆ.
*ಹಾಲಿಗೆ ಹಣ್ಣುಗಳನ್ನು ಬೆರೆಸಿದರೆ ಅದರ ಪೌಷ್ಟಿಕಾಂಶ ಹೆಚ್ಚಾಗುತ್ತದೆ. ಹಾಲಿಗೆ ಹಣ್ಣುಗಳನ್ನು ಸೇರಿಸಿ ಮಿಲ್ಕ್ ಶೇಕ್ ಮಾಡಿ. ಅದನ್ನು ಮಕ್ಕಳಿಗೆ ನೀಡಿ. ಹಾಲಿಗೆ ಬಾಳೆಹಣ್ಣು, ಸೇಬು, ಸ್ಟ್ರಾಬೆರಿ ಮತ್ತು ಮಾವನ್ನು ಬೆರೆಸಬಹುದು.
*ಬಾದಾಮಿ ಹಾಲು ರುಚಿಕರವಾಗಿದ್ದು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಬಾದಾಮಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ 1 ಗಂಟೆ ನೆನೆಸಿ ಸಿಪ್ಪೆ ತೆಗೆದು ಪೇಸ್ಟ್ ಮಾಡಿ. ಅದನ್ನು ಕುದಿಯುವ ಹಾಲಿನಲ್ಲಿ ಸೇರಿಸಿ ಕುದಿಸಿ. ಇದನ್ನು ಸೇವಿಸಿದರೆ ಮಕ್ಕಳ ಮೆಮೊರಿ ಪವರ್ ಹೆಚ್ಚಾಗುತ್ತದೆ.
*ಕೇಸರಿ ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹಾಲಿನಲ್ಲಿ ಕೇಸರಿಯನ್ನು 2 ಗಂಟೆಗಳ ಕಾಲ ನೆನೆಸಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿ. ಇದರಿಂದ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ.