alex Certify ಬೆಳ್ಳಂಬೆಳಿಗ್ಗೆ ಕುಡಿರಿ ಆರೋಗ್ಯಕರ ಟೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಿಗ್ಗೆ ಕುಡಿರಿ ಆರೋಗ್ಯಕರ ಟೀ

Drink This Green Tea and Lemon Concoction To Boost Immunity And Weight Loss - NDTV Food

ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನೇಕ ಕಷಾಯ, ಆಹಾರ ಸೇವನೆ ಮಾಡಲಾಗ್ತಿದೆ.

ಮನೆಮದ್ದುಗಳ ಸಹಾಯದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರತಿದಿನ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಆದ್ರೆ ಬೆಳಿಗ್ಗೆ ವಿಶೇಷ ಟೀ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಆಯುರ್ವೇದದಲ್ಲಿ ಜೇಷ್ಠಮಧು ಅನೇಕ ರೋಗಗಳ ವಿರುದ್ಧ ಹೋರಾಡಲು ಪರಿಣಾಮಕಾರಿ ಎನ್ನಲಾಗುತ್ತದೆ. ಟೀಗೆ ಇದನ್ನು ಬೆರೆಸಿ ಸೇವಿಸಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಶೀತ ಮತ್ತು ಶೀತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಗಂಟಲು ಮತ್ತು ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೇಷ್ಠಮಧು ಆಂಟಿ-ವೈರಲ್ ಮತ್ತು ಆಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಟೀಗೆ ಲವಂಗವನ್ನು ಸೇರಿಸಿ ಕುಡಿಯಬಹುದು. ಲವಂಗದ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಚಹಾದ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದು ಆಂಟಿ-ವೈರಲ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಕೂಡಿದೆ. ಇದಲ್ಲದೆ ನೀವು ಟೀಗೆ ಶುಂಠಿ, ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಕುಡಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...