ಆಪ್ಟಿಕಲ್ ಇಲ್ಯೂಷನ್ ಎಂಬುದು ಮನುಷ್ಯನ ಕಣ್ಣಿಗಷ್ಟೇ ಅಲ್ಲದೇ ಮೆದುಳಿಗೂ ಸಾಕಷ್ಟು ಕೆಲಸ ಕೊಡುತ್ತದೆ. ಇತ್ತೀಚಿಗೆ ಇದೊಂದು ತಂಪಾದ ಮತ್ತು ವಿಶೇಷವಾದ ಚಟುವಟಿಕೆಯಾಗಿದೆ.
ನೀವು ಒಂದು ವಸ್ತುವನ್ನು ನೋಡುತ್ತಿದ್ದಾಗ, ಅಸಂಖ್ಯಾತ ಭ್ರಮೆಗಳು ನಿಮ್ಮನ್ನು ಗೊಂದಲಕ್ಕೀಡುಮಾಡುತ್ತವೆ ಮತ್ತು ವಿಸ್ಮಯಗೊಳಿಸುತ್ತವೆ.
ಆಪ್ಟಿಕಲ್ ಇಲ್ಯೂಷನ್ ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಇನ್ಸ್ಟಾಗ್ರಾಂ ಪುಟವೊಂದು, ಚಿತ್ರವೊಂದನ್ನ ಹಂಚಿಕೊಂಡು ನಿಮಗೇನು ಕಾಣುತ್ತಿದೆ ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರಿಗೆ ಕೆಲಸ ಕೊಟ್ಟಿದೆ. ಕೆಲವರು ಇದನ್ನು ಡ್ಯ್ರಾಗನ್ ಎಂದು ಗುರ್ತಿಸಿದರೆ ಕೆಲವರು ಡಕ್ (ಬಾತುಕೋಳಿ)ನಂತೆ ಕಾಣುತ್ತಿದೆ ಎಂದಿದ್ದಾರೆ. ಹಾಗಾದ್ರೆ ಈ ಚಿತ್ರ ನಿಮಗೆ ಯಾವ ರೀತಿ ಕಂಡಿದೆ ? ಕಮೆಂಟ್ ಮಾಡಿ.