alex Certify BIG NEWS: ಇನ್ಮುಂದೆ ‘ಸಿಎಂ’ ವಿಚಾರವಾಗಿ ಯಾರೂ ನನ್ನನ್ನು ಪ್ರಶ್ನೆ ಕೇಳಬೇಡಿ; ಗೃಹ ಸಚಿವ ಪರಮೇಶ್ವರ್ ತಾಕೀತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ಮುಂದೆ ‘ಸಿಎಂ’ ವಿಚಾರವಾಗಿ ಯಾರೂ ನನ್ನನ್ನು ಪ್ರಶ್ನೆ ಕೇಳಬೇಡಿ; ಗೃಹ ಸಚಿವ ಪರಮೇಶ್ವರ್ ತಾಕೀತು

ಬೆಂಗಳೂರು: ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಕಾಂಗ್ರೆಸ್ ನಾಯಕರು ತೆರೆ ಎಳೆಯಲು ಮುಂದಾಗಿದ್ದಾರೆ. ಸಿಎಂ ಹುದ್ದೆ ವಿಚಾರವಾಗಿ ಯಾರೂ ನನ್ನನ್ನು ಕೇಳುವಂತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಎಂ ವಿಚಾರವಾಗಿ ಇನ್ಮುಂದೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಯಾರೂ ಈ ವಿಚಾರವಾಗಿ ನನ್ನನ್ನು ಪ್ರಶ್ನೆ ಕೇಳಬೇಡಿ ಎಂದಿದ್ದಾರೆ.

ನಮ್ಮ ಸರ್ಕಾರ ಚನ್ನಾಗಿ ನಡೆಯುತ್ತಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಚಾಚು ತಪ್ಪದೇ ಈಡೇರಿಸುತ್ತಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಜನ ಸಂತೋಷವಾಗಿದ್ದಾರೆ. ಬೇರೆಯವರ ಹೇಳಿಕೆಗಳು ಜಾಸ್ತಿ ಎಫೆಕ್ಟ್ ಆಗಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...