ಬ್ರಿಟನ್ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ 2, ಸೆಪ್ಟೆಂಬರ್ 8ರಂದು ಸ್ಕಾಟ್ಲೆಂಡ್ನಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಹೀಗಾಗಿ ನೂರಾರು ಜನರು ಬಕಿಂಗ್ಹ್ಯಾಮ್ ಅರಮನೆಯ ಹೊರಗೆ ರಾಣಿಗೆ ಅಂತಿಮ ಗೌರವ ಸಲ್ಲಿಸಲು ಜಮಾಯಿಸಿದ್ದರು.
ಈ ವೇಳೆ ಆಕಾಶದಲ್ಲಿ ಅಪರೂಪದ ಡಬಲ್ ಕಾಮನ್ ಬಿಲ್ಲು ಕಂಡು ಬಂದಾಗ ಜನರು ಸಂರ್ಪೂಣವಾಗಿ ದಿಗ್ಭ್ರಮೆಗೊಂಡರು. ಅಲ್ಲಿ ನೆರೆದಿದ್ದವರು ಚಿತ್ರಗಳನ್ನು ತೆಗೆದು ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾವಿನ ಘೋಷಣೆ ಮಾಡುವ ಮೊದಲು ಒಂದು ಕಾಮನಬಿಲ್ಲು ಕಾಣಿಸಿಕೊಂಡಿತ್ತು, ಲಂಡನ್ನ ಹೊರಗಿನ ವಿಂಡ್ಸರ್ ಕ್ಯಾಸಲ್ ನಿವಾಸದಲ್ಲಿ ಧ್ವಜವನ್ನು ಇಳಿಸಿದಾಗ ರಾಣಿಯ ಮರಣದ ನಂತರ ಮತ್ತೊಂದು ಕಾಮನ ಬಿಲ್ಲು ಬಂದಿತು ಎಂದು ವರದಿಯಾಗಿದೆ.
ಬಕಿಂಗ್ಹ್ಯಾಮ್ ಅರಮನೆಯ ಮೇಲೆ ಎರಡು ಕಾಮನಬಿಲ್ಲು ಕಾಣಿಸಿದ್ದು ಜೀವನದಲ್ಲಿ ರೂಪಾಂತರವನ್ನು ಸಂಕೇತಿಸುತ್ತದೆ ಎಂದು ಸ್ಥಳೀಯ ಪತ್ರಕರ್ತರು ಬರೆದುಕೊಂಡಿದ್ದಾರೆ.
ಎಲಿಜಬೆತ್ ಅವರನ್ನು ಗೌರವಿಸಲು ಜನಸಮೂಹ ಸೇರುತ್ತಿರುವಾಗ ಬಕಿಂಗ್ಹ್ಯಾಮ್ ಅರಮನೆಯ ಮೇಲೆ ಕಾಮನ ಬಿಲ್ಲು ಕಾಣಿಸಿಕೊಂಡಿದ್ದು, ಇದು ದೇವರ ಸಂಕೇತವಾಗಿದೆ ಎಂದು ಲೇಖಕ ಮೇಗನ್ ಬಾಶ್ಮನ್ ಬರೆದಿದ್ದಾರೆ.