alex Certify ಋತುಚಕ್ರದ ಸಮಯದಲ್ಲಿ ಈ ತಪ್ಪು ಮಾಡಲೇಬೇಡ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಋತುಚಕ್ರದ ಸಮಯದಲ್ಲಿ ಈ ತಪ್ಪು ಮಾಡಲೇಬೇಡ…….!

ಮುಟ್ಟಿನ ದಿನಗಳಲ್ಲಿ ಯುವತಿಯರು ನೋವು ಅನುಭವಿಸೋದು ಒಂದೆಡೆಯಾದರೆ, ಮಾನಸಿಕ ಸ್ಥಿಮಿತವನ್ನ ಕಾಪಾಡಿಕೊಳ್ಳುವುದು ಸಹ ಇನ್ನೊಂದು ಸವಾಲು. ಈ ನಾಲ್ಕು ದಿನಗಳ ಅವಧಿಯಲ್ಲಿ ಯುವತಿಯರು ಗೊತ್ತಿಲ್ಲದೆಯೇ ಕೆಲವೊಂದು ತಪ್ಪುಗಳನ್ನ ಮಾಡಿಬಿಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳ ವಿವರ ಇಲ್ಲಿದೆ ನೋಡಿ.

ಯೋನಿಯನ್ನು ಅತಿಯಾಗಿ ಶುಚಿಗೊಳಿಸುವುದು :

ಯೋನಿಯನ್ನ ಸ್ವಚ್ಛಗೊಳಿಸಲು ನೀರು ಸಾಕು. ಆದರೆ ಅನೇಕ ಮಹಿಳೆಯರು ಸುಗಂಧ ದ್ರವ್ಯ ಮಿಶ್ರಿತ ಸೋಪುಗಳನ್ನ ಬಳಕೆ ಮಾಡಿಬಿಡ್ತಾರೆ. ಈ ಸೋಪುಗಳಲ್ಲಿ ಇರುವ ರಾಸಾಯನಿಕ ಅಂಶವು ನಿಮ್ಮ ಯೋನಿಯ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಪಿಹೆಚ್​ ಅಂಶ ಕೂಡ ಸಮತೋಲನ ತಪ್ಪುವ ಸಾಧ್ಯತೆ ಇದೆ.

ನೋವು ನಿವಾರಕ ಮಾತ್ರೆಗಳ ಸೇವನೆ : ನೀವು ಕೂಡ ಮುಟ್ಟಿನ ಸಂದರ್ಭದಲ್ಲಿ ಪೇನ್​ಕಿಲ್ಲರ್ಸ್ ಸೇವನೆ ಮಾಡುವವರಾಗಿದ್ದರೆ ದಯಮಾಡಿ ಈ ಅಭ್ಯಾಸವನ್ನ ಇಂದಿಗೇ ಬಿಟ್ಟುಬಿಡಿ. ಅಮೆರಿಕನ್​ ನ್ಯಾಷನಲ್​ ಲೈಬ್ರರಿ ಆಫ್​ ಮೆಡಿಸಿನ್​ ನೀಡಿರುವ ವರದಿಯ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ನೋವು ನಿವಾರಕಗಳ ಸೇವನೆಯಿಂದ ದೇಹದಲ್ಲಿನ ಒಳ್ಳೆಯ ಬ್ಯಾಕ್ಟಿರಿಯಾಗಳು ನಾಶವಾಗಿಬಿಡುತ್ತದೆ. ಇದು ಮಾತ್ರವಲ್ಲದೇ ಭವಿಷ್ಯದಲ್ಲಿ ನಿಮಗೆ ಹೃದಯ, ಯಕೃತ್ತು ಹಾಗೂ ಕಿಡ್ನಿ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಇದೆ.

ಸರಿಯಾದ ಸಮಯಕ್ಕೆ ನ್ಯಾಪ್ಕಿನ್​ ಬದಲಾವಣೆ ಮಾಡದಿರೋದು : ಇದು ಬಹುತೇಕ ಎಲ್ಲಾ ಮಹಿಳೆಯರು ಮಾಡುವ ತಪ್ಪು. ಅನೇಕರು ಕೆಲಸದ ಒತ್ತಡದಿಂದಾಗಿ ಅಥವಾ ಸರಿಯಾದ ಜಾಗ ಸಿಗದ ಕಾರಣ ದೀರ್ಘ ಕಾಲದವರೆಗೆ ಪ್ಯಾಡ್​ಗಳನ್ನ ಬದಲಾಯಿಸೋದಕ್ಕೆ ಹೋಗೋದೇ ಇಲ್ಲ. ಇದರಿಂದ ನಿಮ್ಮ ಯೋನಿಯ ಭಾಗದಲ್ಲಿ ಅಲರ್ಜಿ ಉಂಟಾಗಲಿದೆ.

ಅತಿಯಾದ ಆಹಾರ ಸೇವನೆ : ಮುಟ್ಟಿನ ಸಂದರ್ಭದಲ್ಲಿ ನೋವನ್ನ ಮರೆಯಬೇಕು ಎಂಬ ಕಾರಣಕ್ಕೆ ಮಹಿಳೆಯರು ಸಿಕ್ಕಿದ್ದನ್ನೆಲ್ಲ ತಿಂದುಬಿಡ್ತಾರೆ. ಆದರೆ ಈ ಸಂದರ್ಭದಲ್ಲಿ ನೀವು ಆರೋಗ್ಯಕ್ಕೆ ಹೆಚ್ಚು ಪೂರಕವಾದ ಆಹಾರ ಹಾಗೂ ಬಿಸಿನೀರನ್ನು ಸೇವನೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...