ಯೋನಿಯನ್ನ ಸ್ವಚ್ಛಗೊಳಿಸಲು ನೀರು ಸಾಕು. ಆದರೆ ಅನೇಕ ಮಹಿಳೆಯರು ಸುಗಂಧ ದ್ರವ್ಯ ಮಿಶ್ರಿತ ಸೋಪುಗಳನ್ನ ಬಳಕೆ ಮಾಡಿಬಿಡ್ತಾರೆ. ಈ ಸೋಪುಗಳಲ್ಲಿ ಇರುವ ರಾಸಾಯನಿಕ ಅಂಶವು ನಿಮ್ಮ ಯೋನಿಯ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಪಿಹೆಚ್ ಅಂಶ ಕೂಡ ಸಮತೋಲನ ತಪ್ಪುವ ಸಾಧ್ಯತೆ ಇದೆ.
ನೋವು ನಿವಾರಕ ಮಾತ್ರೆಗಳ ಸೇವನೆ : ನೀವು ಕೂಡ ಮುಟ್ಟಿನ ಸಂದರ್ಭದಲ್ಲಿ ಪೇನ್ಕಿಲ್ಲರ್ಸ್ ಸೇವನೆ ಮಾಡುವವರಾಗಿದ್ದರೆ ದಯಮಾಡಿ ಈ ಅಭ್ಯಾಸವನ್ನ ಇಂದಿಗೇ ಬಿಟ್ಟುಬಿಡಿ. ಅಮೆರಿಕನ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನೀಡಿರುವ ವರದಿಯ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ನೋವು ನಿವಾರಕಗಳ ಸೇವನೆಯಿಂದ ದೇಹದಲ್ಲಿನ ಒಳ್ಳೆಯ ಬ್ಯಾಕ್ಟಿರಿಯಾಗಳು ನಾಶವಾಗಿಬಿಡುತ್ತದೆ. ಇದು ಮಾತ್ರವಲ್ಲದೇ ಭವಿಷ್ಯದಲ್ಲಿ ನಿಮಗೆ ಹೃದಯ, ಯಕೃತ್ತು ಹಾಗೂ ಕಿಡ್ನಿ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಇದೆ.
ಸರಿಯಾದ ಸಮಯಕ್ಕೆ ನ್ಯಾಪ್ಕಿನ್ ಬದಲಾವಣೆ ಮಾಡದಿರೋದು : ಇದು ಬಹುತೇಕ ಎಲ್ಲಾ ಮಹಿಳೆಯರು ಮಾಡುವ ತಪ್ಪು. ಅನೇಕರು ಕೆಲಸದ ಒತ್ತಡದಿಂದಾಗಿ ಅಥವಾ ಸರಿಯಾದ ಜಾಗ ಸಿಗದ ಕಾರಣ ದೀರ್ಘ ಕಾಲದವರೆಗೆ ಪ್ಯಾಡ್ಗಳನ್ನ ಬದಲಾಯಿಸೋದಕ್ಕೆ ಹೋಗೋದೇ ಇಲ್ಲ. ಇದರಿಂದ ನಿಮ್ಮ ಯೋನಿಯ ಭಾಗದಲ್ಲಿ ಅಲರ್ಜಿ ಉಂಟಾಗಲಿದೆ.
ಅತಿಯಾದ ಆಹಾರ ಸೇವನೆ : ಮುಟ್ಟಿನ ಸಂದರ್ಭದಲ್ಲಿ ನೋವನ್ನ ಮರೆಯಬೇಕು ಎಂಬ ಕಾರಣಕ್ಕೆ ಮಹಿಳೆಯರು ಸಿಕ್ಕಿದ್ದನ್ನೆಲ್ಲ ತಿಂದುಬಿಡ್ತಾರೆ. ಆದರೆ ಈ ಸಂದರ್ಭದಲ್ಲಿ ನೀವು ಆರೋಗ್ಯಕ್ಕೆ ಹೆಚ್ಚು ಪೂರಕವಾದ ಆಹಾರ ಹಾಗೂ ಬಿಸಿನೀರನ್ನು ಸೇವನೆ ಮಾಡಿ.