ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಯಾವಾಗ ಬೇಕು ಆವಾಗ ಸೇವಿಸುವ ಹಾಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನೀವು ಮೂಲಂಗಿ ಸೇವಿಸಿದರೆ ಇದರಿಂದ ನೀವು ಮುಜುಗರಕ್ಕೀಡಾಗುತ್ತೀರಿ.
ಮೂಲಂಗಿಯನ್ನು ವಿಶೇಷ ಕಾರ್ಯಕ್ರಮಗಳ ವೇಳೆ ಸೇವಿಸಿದರೆ ನೀವು ತೊಂದರೆಗೊಳಗಾಗುತ್ತೀರಿ. ನೀವು ಪೂಜೆ ಪುನಸ್ಕಾರಗಳನ್ನು ಮಾಡುವ ಸಮಯದಲ್ಲಿ, ಸಭೆ ಸಮಾರಂಭಗಳಿಗೆ ಹೋಗುವ ವೇಳೆ, ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಹೋಗುವ ವೇಳೆ, ದೂರದ ಊರಿಗೆ ಪ್ರಯಾಣ ಬೆಳೆಸುವಾಗ, ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿಯೂ ಮೂಲಂಗಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬೇಡಿ.
ಯಾಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುವ ಕಾರ್ಯ ನಿರ್ವಹಿಸುತ್ತದೆ. ಆ ವೇಳೆ ಆಮ್ಲ ಉತ್ಪತ್ತಿಯಾಗಿ ನಿಮಗೆ ಹೊಟ್ಟೆ ನೋವು ಕಾಡಬಹುದು. ಇದರಿಂದ ನಿಮಗೆ ಅನಾನುಕೂಲತೆ ಕಾಡಬಹುದು. ಹಾಗಾಗಿ ಮೂಲಂಗಿಯನ್ನು ಸರಿಯಾದ ವೇಳೆಯಲ್ಲಿ ಸೇವಿಸಿದರೆ ಉತ್ತಮ.