alex Certify ತಲೆ ಮೇಲಿಂದ ಜೆಸಿಬಿ ಹೋದರೂ ಬದುಕುಳಿದ ಬಾಲಕ: ಅರೆಕ್ಷಣ ಹೃದಯ ಬಡಿತವನ್ನೇ ನಿಲ್ಲಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಮೇಲಿಂದ ಜೆಸಿಬಿ ಹೋದರೂ ಬದುಕುಳಿದ ಬಾಲಕ: ಅರೆಕ್ಷಣ ಹೃದಯ ಬಡಿತವನ್ನೇ ನಿಲ್ಲಿಸುತ್ತೆ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವಿಡಿಯೋಗಳು ಒಂದೆರಡಲ್ಲ. ಕೆಲ ವಿಡಿಯೋಗಳು ನಗು ತರಿಸಿದ್ರೆ, ಇನ್ನು ಕೆಲ ವಿಡಿಯೋಗಳು ಬೆಚ್ಚಿಬೀಳುವಂತೆ ಮಾಡುತ್ತೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರ ಹೃದಯವೇ ಒಂದೆರಡು ಕ್ಷಣಕ್ಕೆ ನಿಂತೇ ಹೋಗಿದಂತಾಗಿತ್ತು.

ಅದು ’ಸಿಸಿಟಿವಿ ಈಡಿಯಟ್ಸ್’ ಅನ್ನೊ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋ. ಶೀರ್ಷಿಕೆಯಲ್ಲಿ ’ಈತ ಚೀನಾದ ಅದೃಷ್ಟವಂತ ಹುಡುಗ ಎಂದು ಬರೆಯಲಾಗಿದೆ’.

ನಿಜಕ್ಕೂ ಆ ಹುಡುಗ ಅದೃಷ್ಟವಂತ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಈ ಘಟನೆ ಚೀನಾದ ಅನ್ಹುಯಿ ಯ ಬೊಝೌನ್ನಲ್ಲಿ ನಡೆದಿದೆ. ಈ ದೃಶ್ಯದಲ್ಲಿ ಎಲ್ಲರೂ ಗಮನಿಸುವ ಹಾಗೆ ಪುಟ್ಟ ಬಾಲಕನೊಬ್ಬ ರಸ್ತೆ ಬದಿಯಲ್ಲಿ ಧಾನ್ಯಗಳನ್ನ ಒಣಗಿಸಲು ತನ್ನ ತಂದೆಗೆ ಸಹಾಯ ಮಾಡುತ್ತಿರುತ್ತಾನೆ.

ಅದೇ ರಸ್ತೆಯ ಇನ್ನೊಂದು ಬದಿಯಲ್ಲಿ ಆ ಬಾಲಕನ ತಾಯಿ ಬರುತ್ತಿರುತ್ತಾಳೆ. ಅಮ್ಮನನ್ನ ನೋಡಿದ ಖುಷಿಗೆ ಆ ಬಾಲಕ ಓಡೋಡಿ ಬರುತ್ತಾನೆ. ಅದೇ ಸಮಯದಲ್ಲಿ ಯಾರೂ ನಿರೀಕ್ಷೆ ಮಾಡದ ಘಟನೆ ನಡೆಯುತ್ತೆ. ಅದೇ ರಸ್ತೆಯಲ್ಲಿ ಜೆಸಿಬಿಯೊಂದು ವೇಗವಾಗಿ ಬಂದು ಬಿಡುತ್ತೆ. ಅದೇ ಜೆಸಿಬಿ ಕೆಳಗೆ ಬಾಲಕ ಸಿಕ್ಕಾಕಿಕೊಂಡು ಬಿಡುತ್ತಾನೆ.

ಅಸಲಿಗೆ ಜೆಸಿಬಿಯನ್ನ ನೋಡಿ ಭಯಬಿದ್ದು ಆ ಬಾಲಕ ಅಲ್ಲೇ ಕೂತು ಬಿಡುತ್ತಾನೆ. ಅಲ್ಲಿದ್ದವರೆಲ್ಲ ಬಾಲಕ ಬದುಕುಳಿಯೋದಕ್ಕೆ ಸಾಧ್ಯವೇ ಇಲ್ಲ ಅಂತ ಅಂದುಕೊಂಡಾಗಲೇ ಬಾಲಕ ಪವಾಡ ಸದೃಶ್ಯವಾಗಿ ಬದುಕುಳಿದಿರುತ್ತಾನೆ. ಆತನಿಗೆ ಚಿಕ್ಕಪುಟ್ಟ ಗಾಯಗಳಾಗಿರುತ್ತೆ ಅಷ್ಟೆ.

ಅಲ್ಲೇ ನಿಂತಿದ್ದ ಬಾಲಕನ ತಾಯಿ ಈ ಘಟನೆ ನೋಡಿ ಹೌಹಾರಿ ಹೋಗಿದ್ದಳು. ಮಗನಿಗೆ ಏನೂ ಆಗಿಲ್ಲ ಅಂತ ಅವಳ ಜೀವ ಮರಳಿ ಬಂದ ಹಾಗಿತ್ತು. ಓಡಿ ಹೋಗಿ ಮಗನಿಗೆ ತಬ್ಬಿಕೊಂಡು ಜೋರಾಗಿ ಅತ್ತು ಬಿಡುತ್ತಾಳೆ.

ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲರೂ ಶಾಕ್ ಆಗಿದ್ದಾರೆ. ಮಗುವಿಗೆ ಏನೂ ಆಗಿಲ್ಲ ಅನ್ನೊದೇ ಅನೇಕರಿಗೆ ಸಮಾಧಾನ ತಂದಿದೆ. ಎಲ್ಲರೂ ತಮ್ಮ ತಮ್ಮ ಅನಿಸಿಕೆಯನ್ನ ಹಾಗೂ ಮಗುವಿಗೆ ಏನೂ ಅಪಾಯ ಅಂತ ನಿಟ್ಟುಸಿರೆಳೆದುಕೊಂಡು ಕಾಮೆಂಟ್ ಹಾಕಿದ್ದಾರೆ.

— CCTV IDIOTS (@cctvidiots) April 19, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...