ತಮಿಳುನಾಡಿನ ಮಿತಿಮೀರಿದ್ದ ವರುಣನ ರುದ್ರನರ್ತನ ಕರ್ನಾಟಕ ಹಾಗೂ ಆಂಧ್ರಪ್ರದೇಶದವರೆಗೂ ವ್ಯಾಪಿಸಿದೆ. ಪ್ರಸಿದ್ಧ ತಿರುಪತಿ ತಿರುಮಲ ದೇಗುಲದ ಸುತ್ತ ಪ್ರವಾಹದ ರೌದ್ರಾವತಾರ ಎನ್ನಲಾದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ವಿಚಾರವಾಗಿ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನಂನ ಇಓ ಡಾ.ಕೆ.ಎಸ್ ಜವಾಹರ್ ರೆಡ್ಡಿ ತಿರುಮಲ ಪ್ರವಾಹದ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋಗಳನ್ನು ನಂಬದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲು ಸಂಚಾರ…..!
ಧಾರಾಕಾರ ಮಳೆಯಿಂದಾಗಿ ಮೊದಲ ಹಾಗೂ ಎರಡನೇ ಘಾಟ್ಗಳಲ್ಲಿ ಬಂಡೆಗಳು ವಿವಿಧ ಹಂತಗಳಲ್ಲಿ ಬಿದ್ದಿವೆ. ಸುರಕ್ಷತಾ ದೃಷ್ಟಿಯಿಂದ ಗುರುವಾರದಿಂದಲೇ ಘಾಟ್ಗಳನ್ನು ಬಂದ್ ಮಾಡಲಾಗಿದೆ. ಆದರೆ ಡೌನ್ ಘಾಟ್ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಯಾತ್ರಾರ್ಥಿಗಳಿಗೆ ಈ ಘಾಟ್ನಲ್ಲಿ ತಿರುಗಾಡಲು ಅವಕಾಶ ನೀಡುತ್ತಿದ್ದೇವೆ ಎಂದು ಜವಾಹಾರ್ ರೆಡ್ಡಿ ಹೇಳಿದ್ರು.
ಬಂಡೆಗಳನ್ನು ತೆರವುಗೊಳಿಸಿದ ಬಳಿಕ ನಾವು ರಸ್ತೆಯನ್ನು ಭಕ್ತರ ಉಪಯೋಗಕ್ಕೆ ನೀಡುತ್ತೇವೆ. ಕೆಲವು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ತಿರುಮಲ ಪ್ರವಾಹದ ಹೆಸರಿನಲ್ಲಿ ನಕಲಿ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಇದರಿಂದ ಭಕ್ತಾದಿಗಳ ಕುಟುಂಬಸ್ಥರು ಭಯಭೀತರಾಗಿದ್ದಾರೆ. ತಿರುಮಲದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಭಕ್ತರನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ರು.