alex Certify ಬಂಧನಕ್ಕೊಳಗಾಗಿದ್ದ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನಕ್ಕೊಳಗಾಗಿದ್ದ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಬಿಡುಗಡೆ

ಮಿಯಾಮಿ: ಸರ್ಕಾರದ ದಾಖಲೆ ಅಕ್ರಮವಾಗಿ ಸಂಗ್ರಹಿಟ್ಟಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಪ್ರಕರಣದ ಸಂಬಂಧ ಮಿಯಾಮಿ ನ್ಯಾಯಾಲಯ ಎದುರು ಟ್ರಂಪ್ ಶರಣಾಗಿದ್ದರು. ಅವರನ್ನು ಬಂಧಿಸಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ, ಬೆರಳಚ್ಚು, ಫೋಟೋ, ಡಿಎನ್ಎ ಸಂಗ್ರಹ ಮಾಡಲಾಗಿದೆ. ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಟ್ರಂಪ್ ಅವರನ್ನು ಬಿಡುಗಡೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಸರ್ಕಾರದ ದಾಖಲೆಗಳ ಅಕ್ರಮ ಸಂಗ್ರಹ ಆರೋಪ ಕೇಳಿ ಬಂದಿದೆ. 300ಕ್ಕೂ ಹೆಚ್ಚು ರಹಸ್ಯ ಕಡತಗಳನ್ನು ಅವರು ಅಕ್ರಮವಾಗಿ ಸಂಗ್ರಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಯಾಮಿ ಕೋರ್ಟ್ ಡೊನಾಲ್ಡ್ ಟ್ರಂಪ್ ವಿಚಾರಣೆ ನಡೆಸಲಿದೆ. ಆರೋಪ ಸಾಬೀತದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...