alex Certify BIG NEWS : ‘ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ, ಅನ್ನಭಾಗ್ಯ ಅಲ್ಲ ಕನ್ನಭಾಗ್ಯ’ : ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ, ಅನ್ನಭಾಗ್ಯ ಅಲ್ಲ ಕನ್ನಭಾಗ್ಯ’ : ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ

ಬೆಂಗಳೂರು : ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ . ಕೇಂದ್ರದ ಅಕ್ಕಿ ಹೊರತುಪಡಿಸಿ 10 ಕೆಜಿ ಅಕ್ಕಿ ಕೊಡ್ತೀವಿ ಎಂದ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.

3 ಕೆಜಿ ಅಕ್ಕಿ, 2 ಕೆಜಿ ಜೋಳ ಅಥವಾ ರಾಗಿ ಕೊಡ್ತೀವಿ ಅಂತಿದ್ದಾರೆ. ಇದು ಅನ್ನಭಾಗ್ಯ ಅಲ್ಲ ಕನ್ನಭಾಗ್ಯ ಯೋಜನೆ. ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ಕೊಡಬೇಕಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು BJP ಸದಸ್ಯರು ಸದನದಲ್ಲಿ ಗದ್ದಲ ನಡೆಸಿದರು. ಮೋದಿಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು. ಬ್ಯಾಂಕ್ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನೆ ಮಾಡಿದರು. ಈ ವೇಳೆ ಕೋನರೆಡ್ಡಿ ಮಾತಿಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...