ಇಂಜೆಕ್ಷನ್ ನೀಡಲು ಬರುತ್ತಿದ್ದಂತೆ ಹೇಗಿತ್ತು ಗೊತ್ತಾ ನಾಯಿ ರಿಯಾಕ್ಷನ್ ? 09-07-2022 12:30PM IST / No Comments / Posted In: Latest News, Live News, International ಮಕ್ಕಳಲ್ಲಿ ಇಂಜೆಕ್ಷನ್ ಭಯ ಸಾಮಾನ್ಯ, ದೊಡ್ಡವರೂ ಸಹ ಇಂಜೆಕ್ಷನ್ ನೋಡಿದ ಕೂಡಲೇ ಇಲ್ಲದ ಆತಂಕ ವ್ಯಕ್ತಪಡಿಸುತ್ತಾರೆ. ರಕ್ತ ಪರೀಕ್ಷೆಗೂ ಹಿಂದೇಟು ಹೊಡೆಯುವುದುಂಟು. ಸೂಜಿಯ ಮೇಲಿನ ಹೆದರಿಕೆ ಅಂಥದ್ದು. ಆದರೆ, ನಾಯಿಯೊಂದು ಸೂಜಿಯನ್ನು ಹತ್ತಿರ ತಂದಾಗ ಕಿರುಚುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅದನ್ನು ಕಂಡು, ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ. ಸಾಕಷ್ಟು ಮಂದಿಗೆ ನಾಯಿಗಳು ಅಚ್ಚುಮೆಚ್ಚಿನ ಸಾಕುಪ್ರಾಣಿ, ಕುಟುಂಬದ ಭಾಗವೆಂದು ಪರಿಗಣಿಸುತ್ತಾರೆ ಮತ್ತು ಅದೇ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಈ ವಿಡಿಯೊದಲ್ಲಿ ವೈದ್ಯರು ಮತ್ತು ನರ್ಸ್ ಸೂಜಿಯೊಂದಿಗೆ ಪೊಮೆರೇನಿಯನ್ಗೆ ಚುಚ್ಚಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೂಜಿಯನ್ನು ಅದರ ಹತ್ತಿರ ತಂದಾಗ, ನಾಯಿ ಕಿರುಚಲು ಪ್ರಾರಂಭಿಸುತ್ತದೆ. ವೈದ್ಯರು ಮತ್ತು ನರ್ಸ್ ಈ ಸನ್ನಿವೇಶದಲ್ಲಿ ನಗುವುದನ್ನು ಕಾಣಬಹುದು. ಆದರೆ, ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವು ತಾವೂ ನಗುತರಿಸಿಕೊಂಡಿದ್ದಾರೆ. ಆದರೆ, ನಾಯಿ ಪ್ರೇಮಿಗಳ ಕರಳು ಕಿವುಚಿದಂತಾಗಿದೆ. ಅಂತವರು ಸಿಡಿಮಿಗೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Pomeranians are incredibly cuteAdorable 🥰 — Ronit (@Ronit15643377) July 6, 2022 That is just like my Pom!🤣 So dramatic! — Riley's Mom (@Squiggs3021) July 6, 2022 As a dog groomer, this isn't funny, or cute. When dogs squeal like that it makes us look bad to people watching and for such a reaction to just having its feet touched I imagine the dog is a nightmare being groomed. — Amy not okay Kirk #Childfree💀👩🏼🎨🕊💜🏳️🌈♎️ (@AmyKirk92) July 6, 2022